ಕೊಲೆ ಪ್ರಕರಣದ ನಾಲ್ವರ ಬಂಧನ

ನಾಲ್ವರ ಬಂಧನ
ನಾಲ್ವರ ಬಂಧನ
Published on
ಧಾರವಾಡ: ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಗೃಹಿಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಸೇರಿ ನಾಲ್ವರನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಂದಾಪೂರ ಗ್ರಾಮದ ನಿವಾಸಿ ನರ್ಸ್​ ಆಗಿದ್ದ ಪ್ರಿಯಾಂಕಾ ಕಮಲಾಕರ (29) ಮದುವೆ ನವಲಗುಂದ ತಾಲೂಕಿನ ಹಣಸಿ ಗ್ರಾಮದ ಬಸವರಾಜ ವಡ್ಡರ ಜತೆ 2024ರಲ್ಲಿ ನಡೆದಿತ್ತು. ಮದುವೆಯಾದಾಗಿನಿಂದ ಪತಿ ಹಾಗೂ ಕುಟುಂಬದವರು ಹಣ, ಬಂಗಾರ ತರುವಂತೆ ಕಿರುಕುಳ ನೀಡುತ್ತಿದ್ದರು. ಇದೇ ವಿಚಾರವಾಗಿ ಜೂ. 29ರಂದು ರಾತ್ರಿ 11.50ರ ಸುಮಾರಿಗೆ ಜಗಳ ತೆಗೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಪ್ರಿಯಾಂಕಾ ಪತಿ ಬಸವರಾಜ, ಸಂಬಂಧಿಕರಾದ ರೇಣವ್ವ ವಡ್ಡರ, ಸುಭಾಸ ವಡ್ಡರ, ಸಿದ್ದರಾಮೇಶ್ವರ ವಡ್ಡರ ಎಂಬುವರನ್ನು ಬಂಧಿಸಿದ್ದಾರೆ. ಕೊಲೆ ನಡೆದ 24 ಗಂಟೆಯೊಳೆಗೆ ಆರೋಪಿಗಳನ್ನು ಪತ್ತೆ ಮಾಡಿದ ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್​ಐ ಜನಾರ್ದನ ಹಾಗೂ ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗುಂಜನ್​ ಆರ್ಯ ಪ್ರಶಂಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net