ಮಾಜಿ ಶಾಸಕ ಪುತ್ರನನ್ನು ಹತ್ಯೆಗೈದು ಬೆಂಕಿ ಹಚ್ಚಿದ್ದ ನಾಲ್ವರ ವಶ

ರಾಜು ಬೋಳಶೆಟ್ಟಿ
ರಾಜು ಬೋಳಶೆಟ್ಟಿ
Published on
ಧಾರವಾಡ: ಬೆಳಗಾವಿ ಜಿಲ್ಲೆ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್​ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರನ್ನು ಬೇರೆಡೆ ಹತ್ಯೆಗೈದು ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಕಾರ್​ನಲ್ಲಿ ಸುಟ್ಟಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಮಹಿಳೆ, ಆಕೆಯ ಪುತ್ರ ಸೇರಿ ನಾಲ್ವರನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ನಿವಾಸಿ ರಾಜು ಬೋಳಶೆಟ್ಟಿ ಮಾ. 23ರಂದು ಸಂಜೆಯಿಂದ ಕಾಣೆಯಾಗಿದ್ದರು. ಅವರಿಗೆ ಕರೆ ಮಾಡಿದ್ದ ತಂಡವೊಂದು ಹಣಕಾಸಿನ ವಿಚಾರವಾಗಿ ಮಾತುಕತೆಗೆ ಕರೆದಿತ್ತು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಮಾ. 23ರಂದು ರಾತ್ರಿ 8 ಗಂಟೆ ಸುಮಾರಿಗೆ ಅವರದೇ ಾಮ್​ರ್ಹೌಸ್​ನಲ್ಲಿ ಹತ್ಯೆ ಮಾಡಿದೆ. ನಂತರ ಅವರ ಕೆಎ&24 ಎನ್​& 0383 ಕಾರ್​ನಲ್ಲಿ ಧಾರವಾಡ ತಾಲೂಕಿನ ರಾಮಾಪುರ ಬಳಿಯ ನಿರ್ಜನ ಅರಣ್ಯ ಪ್ರದೇಶಕ್ಕೆ ತಂದಿದ್ದರು. ಮೃತದೇಹವನ್ನು ಕಾರ್​ನಲ್ಲಿಟ್ಟು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಈ ಕುರಿತು "ವಿಜಯವಾಣಿ'ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಗುಂಜನ್​ ಆರ್ಯ, ಕಾರ್​ ಸುಟ್ಟ ಸ್ಥಳಕ್ಕೆ ಭೇಟಿ ನೀಡಿದ್ದಾಗ ಇದು ಮೇಲ್ನೋಟಕ್ಕೆ ಕೊಲೆ ಎಂಬುದು ದೃಢವಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವಿಶೇಷ ತಂಡ ಮರಣೋತ್ತರ ಪರೀೆ ನಡೆಸಿ ಸ್ಥಳದಿಂದ ಸಾಕ್ಷ$್ಯಗಳನ್ನು ಸಂಗ್ರಹಿಸಿತ್ತು. ನಂತರ ತಾಂತ್ರಿಕ ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಿದಾಗ ಹಣಕಾಸಿನ ವಿಚಾರವಾಗಿ ವೈಯಕ್ತಿಕ ದ್ವೇಷ ಇರುವುದು ಪತ್ತೆಯಾಗಿತ್ತು. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net