ಪ್ರತ್ಯೇಕ ಪಾಲಿಕೆಗಾಗಿ ಹೋರಾಟಕ್ಕೆ ಫೋರಂ ಆಫ್​ ಕನ್ಸಲ್ಟಿಂಗ್​ ಇಂಜಿನಿಯರ್ಸ್​ ಬೆಂಬಲ

ಧಾರವಾಡ ಪ್ರತ್ಯೇಕ ಪಾಲಿಕೆಯ ಹೋರಾಟಕ್ಕೆ ಫೋರಂ ಆಫ್​  ಕನ್ಸಲ್ಟಿಂಗ್​ ಇಂಜಿನಿಯರ್ಸ್​ ಸಂಘದಿಂದ ಮಂಗಳವಾರ ಬೆಂಬಲ ನೀಡಲಾಯಿತು.
ಧಾರವಾಡ ಪ್ರತ್ಯೇಕ ಪಾಲಿಕೆಯ ಹೋರಾಟಕ್ಕೆ ಫೋರಂ ಆಫ್​ ಕನ್ಸಲ್ಟಿಂಗ್​ ಇಂಜಿನಿಯರ್ಸ್​ ಸಂಘದಿಂದ ಮಂಗಳವಾರ ಬೆಂಬಲ ನೀಡಲಾಯಿತು.
Published on
ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆಫೋರಂ ಆಫ್​​ ಕನ್ಸಲ್ಟಿಂಗ್​ ಇಂಜಿನಿಯರ್ಸ್​ ಬೆಂಬಲ ಸೂಚಿಸಿದರು. ಸಂಘ ಪದಾಧಿಕಾರಿಗಳು ಮಂಗಳವಾರ ನಗರದ ಪಾಲಿಕೆ ಕಟ್ಟಡದ ಎದುರು ನಡೆಯುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಬೆಂಬಲ ಪತ್ರ ನೀಡಿದರು.
ಧಾರವಾಡ ಪ್ರತ್ಯೇಕ ಪಾಲಿಕೆಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಮಂಗಳವಾರ 19 ದಿನ ಪೂರೈಸಿತು. ಮೇ 15ರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ನೇತೃತ್ವದಲ್ಲಿ ಕೈಗೊಂಡಿರುವ ಸತ್ಯಪ್ರತಿಪಾದನಾ ಸತ್ಯಾಗ್ರಹವನ್ನು ವಿವಿಧ ಸಂ& ಸಂಸ್ಥೆಗಳ ಬೆಂಬಲ ಹೆಚ್ಚುತ್ತಲೇ ಇದೆ.
ಫೋರಂ ಪದಾಧಿಕಾರಿಗಳು ಮಾತನಾಡಿ, ಧಾರವಾಡ ಪ್ರತ್ಯೇಕ ಪಾಲಿಕೆಯಾಗುವುದು ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಅವಶ್ಯವಾಗಿದೆ. ವಿಕೇಂದ್ರೀಕರಣದಿಂದ ಧಾರವಾಡ ಜನತೆಯ ಸಮಯ ಹಾಗೂ ಖರ್ಚು ಉಳಿತಾಯವಾಗುತ್ತದೆ. ಎರಡೂ ಮಹಾನಗರಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಅನುದಾನ ದೊರೆಯುತ್ತದೆ ಎಂದರು.
ಮಲ್ಲಿಕಾರ್ಜುನ ಮುತ್ನಾಳ, ಸತೀಶ ನಾಯ್ಕರ, ಶಿವಾಜಿ ರಾಣೋಜಿ, ಆನಂದ ಹಿರೇಕೇರಿ, ಆನಂದ ದೇಶಮುಖ, ಸಂತೋಷ ಅಂಚಟಗೇರಿ, ಟಿ.ಎಂ. ತಿಪ್ಪಣ್ಣವರ, ಪ್ರಭುಲಿಂಗ ನರಕೆ, ಇತರರಿದ್ದರು.
19ನೇ ದಿನದ ಹೋರಾಟದಲ್ಲಿ ಬಿ.ಡಿ. ಹಿರೇಮಠ, ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ಮಹಾದೇವ ಹೊರಟ್ಟಿ, ಗುರುರಾಜ ಹುಣಶಿಮರದ, ಶಿವಶಂಕರ ಹಂಪಣ್ಣವರ, ವಿಠ್ಠಲ್​ ಕಮ್ಮಾರ, ಮೋಹನ ರಾಮದುರ್ಗ, ತುಳಜಪ್ಪ ಪೂಜಾರ, ಈಶ್ವರ ಶಿವಳ್ಳಿ, ರಾಜಶೇಖರ ಕಮತಿ, ವಸಂತ ಅರ್ಕಾಚಾರ, ಇತರರು ಪಾಲ್ಗೊಂಡಿದ್ದರು.
ಉಪವಾಸ ಸತ್ಯಾಗ್ರಹ:
19ನೇ ದಿನದ ಧರಣಿಯಲ್ಲಿ ನಾಗರಾಜ ನಾಯಕ, ಸದಾಶಿವ ಭಜಂತ್ರಿ, ಮಹ್ಮದಶಫಿ ಬಿಜಾಪುರಿ, ದತ್ತಗುರು ವಾಡರ, ಶಂಕರ ಕವಟಕೊಪ್ಪ ಉಪವಾಸ ಸತ್ಯಾಗ್ರಹ ಕೈಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net