ಕಬ್ಬಿನ (sugarcane) ಬೆಲೆ ನಿಗದಿಗಾಗಿ ಉನ್ನತ ಸಮಿತಿ ರಚಿಸಿ

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಬ್ಬು (sugarcane)ಬೆಳೆಗೆ ಸಮರ್ಪಕ ಬೆಲೆ ನಿಗದಿ ಕುರಿತು ಮಾತನಾಡಿದಮಾತನಾಡಿದ ಉದಯಕುಮಾರ ಕರ್ಜಗಿಮಠ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಬ್ಬು (sugarcane)ಬೆಳೆಗೆ ಸಮರ್ಪಕ ಬೆಲೆ ನಿಗದಿ ಕುರಿತು ಮಾತನಾಡಿದಮಾತನಾಡಿದ ಉದಯಕುಮಾರ ಕರ್ಜಗಿಮಠ.
Published on

ಪ್ರಮುಖ ಮುಖ್ಯಾಂಶಗಳು

  • ಕಬ್ಬು ಬೆಳೆಗೆ ಸಮರ್ಪಕ ಬೆಲೆ ನಿಗದಿ
  • 15 ದಿನದೊಳಗೆ ಉನ್ನತ ಸಮಿತಿ ರಚಿಸಿ
  • ರೈತರಿಗೆ ಆಗುತ್ತಿರುವ ನಷ್ಟ
ಹುಬ್ಬಳ್ಳಿ : ಕಬ್ಬು ಬೆಳೆಗೆ ಸಮರ್ಪಕ ಬೆಲೆ ನಿಗದಿಗಾಗಿ ಸರ್ಕಾರ 15 ದಿನದೊಳಗೆ ಉನ್ನತ ಸಮಿತಿ ರಚಿಸಿ, ವರದಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಬೆಳಗಾವಿಯ ಸುವರ್ಣ ಸೌಧದ ಎದುರು ರಾಜ್ಯದ ಎಲ್ಲ ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ 
ಕಾರ್ಯದರ್ಶಿ ಉದಯಕುಮಾರ ಕರ್ಜಗಿಮಠ ಎಚ್ಚರಿಕೆ ನೀಡಿದ್ದಾರೆ. 
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸರ್ಕಾರ ನೀಡಿರುವ 3,300 ರೂ. ಬೆಂಬಲ ಬೆಲೆಯನ್ನು ರೈತರು ಒಪ್ಪಿಲ್ಲ. ರೈತರು ಸ್ವಲ್ಪವಾದರೂ ಲಾಭ ಗಳಿಸಬೇಕೆಂದರೆ ಪ್ರತಿ ಕ್ವಿಂಟಾಲ್​ ಕಬ್ಬಿಗೆ ಕನಿಷ್ಠ 5 ಸಾವಿರ ರೂ.ಗಳಾದರೂ ಬೆಂಬಲ ಬೆಲೆ ನೀಡಬೇಕು ಎಂದು ಹೇಳಿದರು. 
ಆದರೆ, ಕೆಲ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಹೆಚ್ಚಿನ ಲಾಭ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ, ಸಕ್ಕರೆ ಕಾರ್ಖಾನೆಗಳ ಲಾಭ, ನಷ್ಟ, ರೈತರಿಗೆ ಆಗುತ್ತಿರುವ ನಷ್ಟ, ಅಗತ್ಯ ಇರುವ ಬೆಂಬಲ ಬೆಲೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸಲು ಸರ್ಕಾರ ಉನ್ನತ ಸಮಿತಿ ರಚಿಸಬೇಕು. 
ಈ ಸಮಿತಿಯಲ್ಲಿ ರಾಜಕಾರಣಿಗಳು, ಕಾರ್ಖಾನೆ ಮಾಲೀಕರು, ರೈತ ಮುಖಂಡರನ್ನು ಸೇರಿಸಿಕೊಳ್ಳಬಾರದು. ಬದಲಾಗಿ, ಪಿಎಚ್​ಡಿ ವಿದ್ಯಾಥಿರ್ಗಳು, ನಿವೃತ್ತ ಐಎಎಸ್​ ಅಧಿಕಾರಿಗಳನ್ನು ಸೇರಿಸಿ, ಅಧ್ಯಯನ ನಡೆಸಬೇಕು. 15 ದಿನದೊಳಗೆ ವರದಿ ತರಿಸಿಕೊಂಡು, ಬಹಿರಂಗಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ದೇಶದ ಯಾವುದೇ ರಾಜ್ಯದಲ್ಲಿ ಕಬ್ಬಿನ ಬೆಲೆ ನಿಗದಿಯ ಗೊಂದಲ ಇಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಇದೆ. ಸರ್ಕಾರ ಇಚ್ಛಾಶಕ್ತಿ ತೋರಿದಲ್ಲಿ ಕೆಲವೇ ಸಮಯದಲ್ಲಿ ಈ ಸಮಸ್ಯೆ ನಿವಾರಿಸಬಹುದು ಎಂದರು. 
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಅವರು ಬೇಗ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಿ ಎಂದು ಆಗ್ರಹಿಸಿದರು. 
ಕಬ್ಬು ಬೆಳೆಗಾರರಿಗೆ ಸಮರ್ಪಕ ಬೆಲೆ ನೀಡುವುದಕ್ಕೆ ಸಂಬಂಧಿಸಿದಂತೆ ನಾವು ಸಹ ವರದಿ ಸಿದ್ಧಪಡಿಸಿದ್ದು, ಎರಡು ದಿನಗಳಲ್ಲಿ ಮುಖ್ಯಮಂತ್ರಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು. 
ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಡಿ. 2ರಂದು ದೆಹಲಿಯ ಅರಣ್ಯ ಭವನದ ಎದುರು ಅನಿದಿರ್ಷ್ಟ ಅವಧಿಯ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಒಂದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. 
ಸರ್ಕಾರ ಬೆಂಬಲ ಬೆಲೆ ಅಡಿ ಹೆಸರು ಖರೀದಿ ಕೇಂದ್ರ ಆರಂಭಿಸಿದೆ. ಆದರೆ, ಗುಣಮಟ್ಟದ ಕೊರತೆ ಕಾರಣದ ನೆಪವೊಡ್ಡಿ ಎಲ್ಲ ರೈತರ ಹೆಸರು ಖರೀದಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ನೈಸಗಿರ್ಕವಾಗಿ ಬೆಳೆದ ಹೆಸರಿನಲ್ಲಿ ಮಾನವನಿಂದ ಯಾವುದೇ ಲೋಪ ಆಗಿರುವುದಿಲ್ಲ. ಹೀಗಾಗಿ, ಖರೀದಿ ಕೇಂದ್ರಕ್ಕೆ ಬರುವ ಎಲ್ಲ ಹೆಸರು ಖರೀದಿಸುವಂತೆ ಒತ್ತಾಯಿಸಿದರು. 
ರೈತ ಮುಖಂಡರಾದ ಗುರು ರಾಯನಗೌಡರ, ಮಲ್ಲಣ್ಣ ಕಲ್ಲೇಕಾರ ಸುದ್ದಿಗೋಷ್ಠಿಯಲ್ಲಿ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net