ಗ್ರಾಮದ ಮಂಜುನಾಥ ಹವಾಲ್ದಾರ ಎಂಬ ಯುವ ರೈತ 2 ಎಕರೆ ಜಮೀನಿನಲ್ಲಿ ಮಾವಿನ ಮರಗಳನ್ನು ಬೆಳೆದಿದ್ದ. ಈ ವರ್ಷ ಹೂವು ಹಾಗೂ ಮಿಡಿಗಳು ಚೆನ್ನಾಗಿಯೇ ಬಿಟ್ಟಿದ್ದವು. ಉತ್ತಮ ಸಲು ನಿರೀಕ್ಷಿಸಿದ್ದ ರೈತನ ಕನಸಿಗೆ ಬೆಂಕಿ ಕೊಳ್ಳಿ ಇಟ್ಟಿದೆ. ಅರಣ್ಯದ ಅಂಚಿನಲ್ಲಿ ಯಾರೋ ಹಚ್ಚಿದ ಬೆಂಕಿಯ ಕಿಡಿ ಹವಾಲ್ದಾರ ಅವರ ಮಾವಿನ ತೋಟದ ಬದುವಿಗೆ ಹತ್ತಿಕೊಂಡಿದೆ. ಇದರಿಂದ ತೋಟದಲ್ಲಿದ್ದ ಸುಮಾರು 80 ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿದ ರೈತ ಹಾಗೂ ನೆರೆಹೊರೆಯವರು ಬೆಂಕಿ ನಂದಿಸಿದ್ದಾರೆ. ಆಕಸ್ಮಿಕ ಬೆಂಕಿಯಿಂದ ರೈತನಿಗೆ ಲಾಂತರ ರೂಪಾಯಿ ಹಾನಿಯಾಗಿದೆ.