footpath enchrochment ಹುಬ್ಬಳ್ಳಿ ಫುಟ್ಪಾತ್ ಮ್ಯಾಲೆ ನೀವು ಕಾಲಿಡುವಂತಿಲ್ಲ

footpath enchrochment ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಫುಟ್ಪಾತ್​ ಮೇಲೆ ವ್ಯಾಪಾರ.
footpath enchrochment ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಫುಟ್ಪಾತ್​ ಮೇಲೆ ವ್ಯಾಪಾರ.
Published on

ಪ್ರಮುಖ ಮುಖ್ಯಾಂಶಗಳು

  • ಫುಟ್ಪಾತ್ ​ ಕಾರ್ಯಾಚರಣೆಗೆ ಹೆಚ್ಚಿದ ಒತ್ತಾಯ
  • ಮಹಾನಗರ ಪಾಲಿಕೆ ಆಡಳಿತ ಇನ್ನಾದರೂ ಎಚ್ಚೆತ್ತೀತೆ?
  • ವಾಹನ ಸವಾರರು, ಪಾದಚಾರಿಗಳ ಸಂಕಟ ನೀಗೀತೆ?
ಹುಬ್ಬಳ್ಳಿ: footpath enchrochment ನಗರದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್ಪಾತ್ ಅತಿಕ್ರಮಣ ತೆರವಿಗೆ ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿಬರುತ್ತಿದೆ.
ಫುಟ್ಪಾತ್ ಇದ್ದರೂ ಪಾದಚಾರಿಗಳ ಬಳಕೆಗೆ ಸಿಗದೇ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಫುಟ್ಪಾತ್ ಮೇಲೆ ನಡೆದಾಡಬೇಕಾದ ಜನರು ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದರಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತಿವೆ.
ಇಲ್ಲಿಯ ಗೋಕುಲ ರಸ್ತೆ, ವಿದ್ಯಾನಗರ ಪ್ರದೇಶದಲ್ಲಿ ಅಕ್ರಮವಾಗಿ ಫುಟ್ಪಾತ್ ಮೇಲೆ ವಾಹನಗಳನ್ನು ಪಾರ್ಕ್​ ಮಾಡಲಾಗುತ್ತದೆ. ಇದರೊಂದಿಗೆ ವ್ಯಾಪಾರ ವಹಿವಾಟು ನಡೆಸುವವರು ಫುಟ್ಪಾತ್​ಗೆ ಬಂದಿರುತ್ತಾರೆ.
ಇನ್ನು ನಗರದ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಸಂಪೂರ್ಣ ರಸ್ತೆ ಇಲ್ಲವೇ ಫುಟ್ಪಾತ್​ಗೆ ಬಂದಿರುತ್ತದೆ. ಮೊದಲೇ ಇಕ್ಕಟ್ಟು ರಸ್ತೆಗಳನ್ನು ಹೊಂದಿರುವ ಮಹಾನಗರದಲ್ಲಿ ಇಂತಹ ಫುಟ್ಪಾತ್ ಅತಿಕ್ರಮಣ ಮಾಡಿ ಜನರ ಜೀವ ಹಿಂಡುತ್ತಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕೂಡಲೇ ತೆರವು ಕಾರ್ಯಾಚರಣೆ ಕೈಗೊಂಡು ಸಾರ್ವಜನಿಕ ಪಾದಚಾರಿಗಳಿಗೆ ಸುರತವಾಗಿ ಓಡಾಡಲು ಅನುವು ಮಾಡಿಕೊಡಬೇಕು ಎಂಬ ಕೂಗು ಜೋರಾಗಿದೆ. ನಗರದ ಯಾವುದೇ ರಸ್ತೆಗೆ ಹೋದರೂ ಅಲ್ಲಿನ ಫುಟ್ಪಾತ್​ಗಳನ್ನು ಅತಿಕ್ರಮಿಸಿಕೊಳ್ಳಲಾಗಿದೆ.
ಹುಬ್ಬಳ್ಳಿಯ ದುರ್ಗದಬೈಲ್​, ದಾಜಿಬಾನಪೇಟ, ಗಾಂಧಿ ಮಾರ್ಕೆಟ್​, ಮಹಾವೀರ ಗಲ್ಲಿ, ವಿಕ್ಟೋರಿಯಾ ರೋಡ್​, ಶಾ ಬಜಾರ್​, ಈ ಪ್ರದೇಶದಲ್ಲಿ ಸದಾ ವಾಹನ ಹಾಗೂ ಜನ ದಟ್ಟಣೆ ತುಂಬಿರುತ್ತದೆ. ಇಲ್ಲಿ ಟ್ರಾಫಿಕ್​ ಸುಗಮವಾಗಬೇಕಾದರೆ ಕಾರ್ಯಾಚರಣೆ ಖಂಡಿತ ಆಗಬೇಕು ಎಂಬುದು ಸಾರ್ವಜನಿಕರ ಅಭಿಮತ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net