ಧಾರವಾಡ: ನಗರದಲ್ಲಿ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಇದರೊಂದಿಗೆ ಬೀದಿಬದಿ ವ್ಯಾಪಾರಸ್ಥರ ಸಂಖ್ಯೆಯೂ ಏರುತ್ತಿದೆ. ಪರಿಣಾಮ ನಗರದ ಕೆಲವೆಡೆ ವಾಹನ ಸವಾರರು, ಮತ್ತೆ ಕೆಲವೆಡೆ ಬೀದಿಬದಿ ವ್ಯಾಪಾರಸ್ಥರುಫುಟ್ಪಾತ್ ಅತಿಕ್ರಮಣ ಮಾಡುತ್ತಿದ್ದಾರೆ. ಅನೇಕ ಕಡೆಫುಟ್ಪಾತ್ಗಳಲ್ಲಿ ಪಾದಚಾರಿಗಳು ನಡೆದಾಡಲೂ ದಾರಿ ಇಲ್ಲದೆ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.