ಹುಬ್ಬಳ್ಳಿ: ಇಲ್ಲಿಯ ಸೇಂಟ್ ಆಂಥೋನಿ ಶಾಲೆಯ foot path 9ನೇ ತರಗತಿಯ ವಿದ್ಯಾರ್ಥಿಗಳು ಪಾದಚಾರಿಗಳ ಸುರಕ್ಷತೆ ಹಾಗೂ ಫುಟ್‌ಪಾತ್‌ಗಳ ಜವಾಬ್ದಾರಿಯುತ ಬಳಕೆ ಕುರಿತು ಸೋಮವಾರ ಜಾಗೃತಿ ಜಾಥಾ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳು ಅಂಗಡಿಕಾರರು, ಪಾದಚಾರಿಗಳು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿ, ಫುಟ್‌ಪಾತ್‌ಗಳಲ್ಲಿ ಕಂಡುಬಂದ ಅಡೆತಡೆಗಳನ್ನು ವಿವರಿಸಿದರು. ಛಾಯಾಚಿತ್ರಗಳ ಮೂಲಕ ಪ್ರಚುರಪಡಿಸಿದರು. ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆ ಪಡೆಯಲು ಪ್ರತಿಕ್ರಿಯೆ ಸ್ಕ್ಯಾನರ್‌ಗಳನ್ನೂ ಅಳವಡಿಸಿದರು.
ಪಿಎಸ್‌ಐಗಳಾದ ಜೆ. ಮೋಹನ, ಸುನೀಲ ಎಂ. ಅವರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಶಾಲೆಯ ಅಧ್ಯಕ್ಷ ಡಾ.ಕೆ.ಎ. ಪ್ರಸಾದ, ಅಕಾಡೆಮಿಕ್ ಹೆಡ್ ಶ್ರೇಯಾ ಕಿರಣ, ಇತರರು ಭಾಗವಹಿಸಿದ್ದರು.