fly over ಶ್ರೀಗಣೇಶ ಹಬ್ಬಕ್ಕೆ ಮೇಲ್ಸೇತುವೆ ಅನುಕೂಲವಾಗಲಿ

fly over ಹುಬ್ಬಳ್ಳಿಯಲ್ಲಿ ನಡೆದಿರುವ ಫ್ಲೈಓವರ್​ ಕಾಮಗಾರಿಯನ್ನು ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಸದಸ್ಯರು ವೀಕ್ಷಿಸಿದರು. ಮೋಹನ ಲಿಂಬಿಕಾಯಿ, ಅಮರೇಶ ಹಿಪ್ಪರಗಿ, ಶಾಂತರಾಜ ಪೋಳ, ಎಸ್​.ಎಸ್​. ಕಮಡೊಳ್ಳಿಶೆಟ್ಟರ, ಜಿ.ಎಸ್​. ಪಲ್ಲೆ ಇತರರು ಇದ್ದರು.
fly over ಹುಬ್ಬಳ್ಳಿಯಲ್ಲಿ ನಡೆದಿರುವ ಫ್ಲೈಓವರ್​ ಕಾಮಗಾರಿಯನ್ನು ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಸದಸ್ಯರು ವೀಕ್ಷಿಸಿದರು. ಮೋಹನ ಲಿಂಬಿಕಾಯಿ, ಅಮರೇಶ ಹಿಪ್ಪರಗಿ, ಶಾಂತರಾಜ ಪೋಳ, ಎಸ್​.ಎಸ್​. ಕಮಡೊಳ್ಳಿಶೆಟ್ಟರ, ಜಿ.ಎಸ್​. ಪಲ್ಲೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ಒತ್ತಾಯ
  • ಗಣೇಶ ಹಬ್ಬವು ಏಕತೆ ಮತ್ತು ಸಾಮರಸ್ಯಕ್ಕೆ ಹೆಸರಾಗಿದೆ

ಹುಬ್ಬಳ್ಳಿ: fly over ನಗರದ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ತಂಡವು ಶ್ರೀ ಗಣೇಶ ಹಬ್ಬದ ವೇಳೆಗೆ ಕಾಮಗಾರಿ ಅನುಕೂಲಕರವಾಗಿರಲಿ ಎಂದು ಒತ್ತಾಯಿಸಿದರು.

ಗಣೇಶ ವಿಗ್ರಹಗಳನ್ನು ತರಲು ಹಾಗೂ ವಿಸರ್ಜನೆ ಮಾಡಲು ಮೇಲ್ಸೇತುವೆ ಕಾಮಗಾರಿ ಬೇಗ ನಡೆಸಿ ಹಬ್ಬ ಆಚರಿಸಲು ಎಲ್ಲ ಅನುಕೂಲತೆಗಳನ್ನು ಕಲ್ಪಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮನವಿ ಮಾಡಲಾಯಿತು.
ಹುಬ್ಬಳ್ಳಿ ಶ್ರೀ ಗಣೇಶ ಹಬ್ಬವು ಕರ್ನಾಟಕ ರಾಜ್ಯದಲ್ಲಿ ಏಕತೆ ಮತ್ತು ಸಾಮರಸ್ಯಕ್ಕೆ ಹೆಸರಾಗಿದೆ. ವೈಭವದಿಂದ ಆಚರಿಸುವುದರಿಂದ ಒಳ್ಳೆಯ ಹೆಸರು ಬಂದಿದೆ. ಗಣೇಶೋತ್ಸವ ನೋಡಲು ನಾನಾ ಕಡೆಯಿಂದ ಭಕ್ತರು ಆಗಮಿಸುತ್ತಾರೆ. ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ವಿಸರ್ಜನೆ ಮೆರವಣಿಗೆಯು ಹೊಸ ಹುಬ್ಬಳ್ಳಿ ದುರ್ಗದಬೈಲ್​ನಿಂದ ಪ್ರಾರಂಭವಾಗಿ ಬ್ರಾಡವೇ, ಮೇದಾರ ಓಣಿ, ದಾಜಿಬಾನಪೇಟ, ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರ ಚನ್ನಮ್ಮ ವೃತ್ತ, ಬಸವ ವನ ಮುಖಾಂತರ ಹೊಸೂರಿನ ಶ್ರೀ ಗಣೇಶ ಬಾವಿ ವರೆಗೆ ನಡೆಯಲಿದೆ.
ಈ ಮೆರವಣಿಗೆ ಮಾರ್ಗವು ಸಂಪೂರ್ಣ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು ತುಂಬಾ ತೊಂದರೆಯಾಗುತ್ತದೆ. ಹಾಗಾಗಿ ಹಬ್ಬದ ಒಳಗಾಗಿ ರಸ್ತೆಗಳ ರಿಪೇರಿ, ದಾರಿಯಲ್ಲಿ ಅಡ್ಡಿಯಾಗುವ ಸಲಕರಣೆಗಳನ್ನು ತೆಗೆದು, ರಸ್ತೆಗೆ ಹಾಕಿರುವ ಬ್ಯಾರಿಕೇಡ್​ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಂಡದ ಸದಸ್ಯರು ಒತ್ತಾಯಿಸಿದರು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಹೊಸೂರು ಮತ್ತು ಬಸವ ವನ ಹತ್ತಿರ ಶ್ರೀ ಗಣೇಶ ವಿಸರ್ಜನೆ ಬಾವಿಗಳು ಇರುವುದರಿಂದ ಮೆರವಣಿಗೆಯು ಆಯಾ ಭಾಗಗಳಿಂದ ಬರಲು ಹಾಗೂ ಹೋಗಲು ವರ್ತುಳ ರಸ್ತೆ ನಿಮಿರ್ಸಿಕೊಡಬೇಕೆಂದು ಆಗ್ರಹಿಸಿದರು.
ತಂಡದಲ್ಲಿ ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಪ್ರೊ. ಜಿ.ಎಸ್​. ಪಲ್ಲೆ, ಎಸ್​.ಎಸ್​. ಕಮಡೊಳ್ಳಿಶೆಟ್ಟರ್​, ಎಸ್​.ಎಂ. ಅಂಗಡಿ, ಈರಣ್ಣ ಪಾಳೆದ, ರಾಜು ಕರಕಣ್ಣವರ, ಶ್ರೀಧರ ಪೂಜಾರ, ಸಂತೋಷ ಕಾಟವೆ, ಈಶ್ವರ ನಾಯ್ಕರ, ರೋಹನ ಗೊಂದಕರ, ಚಂದ್ರಕಾಂತ ನವಲಗುಂದ, ಅನಿಲ ಬೇವಿನಕಟ್ಟಿ, ಅನಿಲ ಕವಿಶೆಟ್ಟಿ, ಬಸವರಾಜ ಹೊಳ್ಳೆಣ್ಣವರ, ಪ್ರಕಾಶ ಹೊಸಮನಿ, ಪಾಂಡುರಂಗ ಮುಸಳೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net