ಸಂಗೀತ ವಿದ್ಯಾಲಯದ ವೈಷ್ಣವಿ ಹಾನಗಲ್ ಮಾತನಾಡಿ, ಗಂಗೂಬಾಯಿ ಹಾನಗಲ್ ಅವರು ವಾಸವಾಗಿದ್ದ ದೇಶಪಾಂಡೆನಗರದ ಮನೆಯಲ್ಲಿ ಸಂಗೀತ ತರಬೇತಿ ನಡೆಸಲಾಗುತ್ತಿದೆ. ಅವರು ಬಳಕೆ ಮಾಡುತ್ತಿದ್ದ ಸಂಗೀತ ಪರಿಕರ, ಅವರಿಗೆ ಸಂದ ಗೌರವ, ಸನ್ಮಾನ, ಬಿರುದುಗಳ ಮ್ಯೂಸಿಯಂ ಮಾಡಲಾಗಿದ್ದು, ಅನೇಕರು ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. ಮಕ್ಕಳು, ಸಂಗೀತಾಸಕ್ತರು ಭೇಟಿ ನೀಡಬಹುದು ಎಂದರು.