ಜಿಲ್ಲಾಽಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಭುವನೇಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಬೀದಿನಾಯಿ ಮರಿಗಳನ್ನು ದತ್ತು ನೀಡಲಾಯಿತು. ಈ ಮರಿಗಳಿಗೆ ಉಚಿತ ರೇಬಿಸ್ ಲಸಿಕೆ, ವಿವಿಧ ರೋಗಗಳ ವಿರುದ್ಧ ಕಂಬೈAಡ್ ವ್ಯಾಕ್ಸಿನ್, ಜಂತುನಾಶಕ ಔಷಧ, ನೆಕ್ ಬೆಲ್ಟ್-ಲೀಷ್, ಪ್ರಾರಂಭಿಕ ಪರಿಕರಗಳ ಕಿಟ್ ಮತ್ತು ರೇಬಿಸ್ ತಿಳುವಳಿಕೆ ಕರಪತ್ರ ನೀಡಲಾಯಿತು ಪಶುಪಾಲನೆ ಮತ್ತು ಪಶು ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಆರ್.ಡಿ. ಪಾಟೀಲ, ಡಾ. ಬಿ.ಪಿ. ಹಿರೇಮಠ, ಕರ್ನಾಟಕ ಪಶುವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ ಡಾ. ತಿಪ್ಪಣ್ಣ, ವಿಭಾಗೀಯ ಕಾರ್ಯದರ್ಶಿ ಡಾ. ರಮೇಶ ಹೆಬ್ಬಳ್ಳಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಕೃಷಪ್ಪ ಆರ್.ಎಂ. ಇತರರಿದ್ದರು. ಡಾ.ಆನಂದ ಪಡೆಯಪ್ಪನವರ ನಿರೂಪಿಸಿದರು.