ಪ್ರಥಮ ದರ್ಜೆ ಸಹಾಯಕ ಅಮಾನತು

ಪಿ. ಮಧುಸೂದನ
ಪಿ. ಮಧುಸೂದನ
Published on
ಧಾರವಾಡ: ಸಹಕಾರ ಸಂಗಳ ಸಹಾಯಕ ನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪಿ. ಮಧುಸೂದನ ಅವರನ್ನು ಅಮಾನತು ಮಾಡಿ ಸಹಕಾರ ಸಂಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ. ಪಿ. ಮಧುಸೂದನ ಅವರು ಲೇವಾದೇವಿ ವ್ಯವಹಾರಕ್ಕೆ ಸಂಬಂಧಿಸಿ ಪರವಾನಗಿ ನೀಡುವ ಕುರಿತು ಸಾರ್ವಜನಿಕರಿಂದ ಹಣ ಪಡೆದಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಸಹಾಯಕ ನಿಬಂಧಕ ಮತ್ತು ಜಂಟಿ ನಿಬಂಧಕರ ವರದಿಯನ್ನು ಆಧರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net