(fire) ಮನೆ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ

ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಝಡೀಕೋ ಗೋದಾಮಿಗೆ ಭಾನುವಾರ ತಗುಲಿದ್ದ ಬೆಂಕಿಯನ್ನು (fire) ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.
ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಝಡೀಕೋ ಗೋದಾಮಿಗೆ ಭಾನುವಾರ ತಗುಲಿದ್ದ ಬೆಂಕಿಯನ್ನು (fire) ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.
Published on
ಹುಬ್ಬಳ್ಳಿ: ನಗರದ ಹೊರ ವಲಯದ ಕುಸುಗಲ್ ರಸ್ತೆಯ ಝಡೀಕೋ ಗೋದಾಮಿಗೆ ಭಾನುವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ (fire) ತಗುಲಿದ್ದು, ಮನೆ ಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ.
ಉಣಕಲ್‌ನ ರವಿ ಜೈನ್ ಎಂಬುವವರಿಗೆ ಈ ಎಲೆಕ್ಟ್ರಾನಿಕ್ ಗೋದಾಮು ಸೇರಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಹಾಗೂ ಬೆಂಕಿ ಆವರಿಸಿದ ಪರಿಣಾಮ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net