Fire Festival: ವೀರಭದ್ರೇಶ್ವರ ದೇವರ ಅಗ್ನಿ ಉತ್ಸವ 28ರಿಂದ

ವೀರಭದ್ರೇಶ್ವರ ದೇವರು
ವೀರಭದ್ರೇಶ್ವರ ದೇವರು
Published on
ಹುಬ್ಬಳ್ಳಿ: ನಗರದ ದೇವಾಂಗ ಪೇಟೆಯ ಶ್ರೀ ವೀರಭದ್ರೇಶ್ವರ ದೇವರ 39ನೇ ಅಗ್ನಿ ಉತ್ಸವ ಜ.28ರಿಂದ ಫೆ. 1ರವರೆಗೆ ನಡೆಯಲಿದೆ. 28ರಂದು ಶ್ರೀ ವೀರಭದ್ರೇಶ್ವರ ಪುರಾಣ ಆರಂಭಗೊಳ್ಳಲಿದೆ. ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಿ.ಕೆ. ರಾಯನಗೌಡ್ರ ಅಧ್ಯಕ್ಷತೆ ವಹಿಸುವರು. ಮಳಲಿಯ ಗುರುಪಾದಯ್ಯ ಶಾಸ್ತ್ರಿಗಳು ಐದು ದಿನ ಪುರಾಣ ಪ್ರವಚನ ನಡೆಸಿಕೊಡುವರು. 30ರಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದಾನಿಗಳಿಗ ಸತ್ಕಾರ ನಡೆಯಲಿದೆ. ಫೆ.1ರಂದು ಬೆಳಗ್ಗೆ 8 ಗಂಟೆಗೆ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿ ಮೆರವಣಿಗೆ, ನಂತರ ಅಗ್ನಿ ಕುಂಡ ಪ್ರವೇಶ ಹಾಗೂ ಮಹಾಪ್ರಸಾದ ಜರುಗುವುದು. ಸಂಜೆ 7 ಗಂಟೆಗೆ ಸುಳ್ಳದ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಚನ ಹಾಗೂ ಪ್ರವಚನಕಾರರಿಗೆ, ದಾನಿಗಳಿಗೆ ಸತ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net