(fire) ಬೆಂಕಿ ತಗುಲಿದ್ದ ವೃದ್ಧೆ ಸಾವು

ಅಕಷ್ಮಿಕ ಸೀರೆಗೆ ಬೆಂಕಿ (fire)
ಅಕಷ್ಮಿಕ ಸೀರೆಗೆ ಬೆಂಕಿ (fire)
Published on
ಹುಬ್ಬಳ್ಳಿ: ದೇವಸ್ಥಾನದಲ್ಲಿ ದೀಪ ಬೆಳಗಿ ನಮಸ್ಕಾರ ಮಾಡುತ್ತಿದ್ದ ವೇಳೆ ಅಕಷ್ಮಿಕ ಸೀರೆಗೆ ಬೆಂಕಿ (fire) ತಾಗಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯೊಬ್ಬರು, ಇಲ್ಲಿಯ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾರೆ.
ಹಳೇಹುಬ್ಬಳ್ಳಿ ಅಯೋಧ್ಯಾನಗರದ ಶಾಂತಾಬಾಯಿ ಪಾಂಡುರಂಗ ಕದಂ (75) ಮೃತರು. ಗುರುವಾರ ಮಧ್ಯಾಹ್ನ ಶ್ರೀರಾಮನಗರದ ಹನಮಂತ ದೇವರ ಗುಡಿಯಲ್ಲಿ ದೀಪ ಹಚ್ಚಿ ನಮಸ್ಕಾರ ಮಾಡುತ್ತಿದ್ದರು.
ಆಗ ಸೀರಿಗೆ ದೀಪದ ಬೆಂಕಿ ತಗುಲಿ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಮೃತರ ಪುತ್ರ ನೀಡಿದ ದೂರಿನ ಮೇರೆಗೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net