ಹೊಸಯಲ್ಲಾಪುರ ಕಸದ ಗುಡ್ಡಕ್ಕೆ ಬೆಂಕಿ

Fire at Garbage yard
Fire at Garbage yard
Published on
ಧಾರವಾಡ: ನಗರದ ಹೊಸಯಲ್ಲಾಪುರದಲ್ಲಿರುವ ಕಸದ ಗುಡ್ಡಕ್ಕೆ ಸೋಮವಾರ ಬೆಳಗ್ಗೆ ಬೆಂಕಿ ಬಿದ್ದಿದ್ದು, ಇದರಿಂದ ವಿಷಯುಕ್ತ ದಟ್ಟ ಹೊಗೆ ಹೊರಹೊಮ್ಮಿದೆ.
ಲಕ್ಷಿ$್ಮನಗರ, ಟೋಲ್​ನಾಕಾ, ಗಾಂಧಿನಗರ ಸೇರಿ ಸುತ್ತ್ತಲಿನ ಪ್ರದೇಶಗಳನ್ನು ದಟ್ಟ ಹೊಗೆ ಆವರಿಸಿದ್ದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟುತ್ತಿದೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹು&ಧಾ ಮುಖ್ಯ ರಸ್ತೆಯ ಟೋಲ್​ನಾಕಾ ವೃತ್ತದ ಬಳಿ ಜಮಾಯಿಸಿದ ನಿವಾಸಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಸಂಚಾರ ಮುಕ್ತಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net