Finnovate ಮೆಗಾ ಫಿನ್ನೋವೇಟ್​ ಶೃಂಗಸಭೆ

finnovate ಮೆಗಾ ಫಿನ್ನೋವೇಟ್​ ಸಮ್ಮಿಟ್​.
finnovate ಮೆಗಾ ಫಿನ್ನೋವೇಟ್​ ಸಮ್ಮಿಟ್​.
Published on
ಹುಬ್ಬಳ್ಳಿ: Finnovate ಇಲ್ಲಿಯ ಐಬಿಎಂಆರ್​ ಕಾಲೇಜ್​ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಫಿನ್​ಟೆಕ್​ ಮತ್ತು ನಾವಿನ್ಯತೆ ಶೃಂಗಸಭೆ ಮೆಗಾ ಫಿನ್ನೋವೇಟ್​ ಸಮ್ಮಿಟ್​ 2026 ಅನ್ನು ಫೆ. 28ರಂದು ನಗರದ ಡೆನಿಸನ್ಸ್​ ಹೋಟೆಲ್​ನಲ್ಲಿ ಆಯೋಜಿಸಲಾಗಿದೆ.
ಸ್ಟಾರ್ಟ್​ ಅಪ್​ ಪಿಚ್​ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ರೂ. 5 ಲಕ್ಷ ರೂ. ಈಕ್ವಿಟಿ ಹೂಡಿಕೆ ಗೆಲ್ಲಬಹುದು. ಕೈಗಾರಿಕೋದ್ಯಮಿಗಳಿಗೆ ನವೀನ ಸಂಶೋಧನೆಗಳನ್ನು ಪರಿಚಯಿಸಲು ಪ್ರದರ್ಶನ ಮೇಳ ಏರ್ಪಡಿಸಲಾಗಿದೆ.
ಭಾರತದ ಡಿಜಿಟಲ್​ ಹಣಕಾಸು ಭವಿಷ್ಯ ರೂಪಿಸುವ ದಿಸೆಯಲ್ಲಿ ಶೃಂಗಸಭೆ ಒತ್ತು ನೀಡಲಿದೆ. ವಿಕಸಿತ ಭಾರತಕ್ಕೆ ಪೂರಕವಾಗಿ ಸಮ್ಮೇಳನ ಮಹತ್ವದ್ದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net