ರೈಲು ಹಳಿ ಅಕ್ರಮ ಪ್ರವೇಶ ಮಾಡಿದವರಿಗೆ ದಂಡ tracks

tracks ದೂಧಸಾಗರ ರೈಲು ಹಳಿ.
tracks ದೂಧಸಾಗರ ರೈಲು ಹಳಿ.
Published on

ಪ್ರಮುಖ ಮುಖ್ಯಾಂಶಗಳು

  • ದೂಧಸಾಗರ್ ಜಲಪಾತ ವೀಕ್ಷಣೆಯತ್ತ ಅಕ್ರಮವಾಗಿ ಚಾರಣ.
  • ಒಟ್ಟು 16,000 ರೂ. ದಂಡ ವಸೂಲಿ ಮಾಡಲಾಗಿದೆ .
  • ದೂಧಸಾಗರ್ ಜಲಪಾತಕ್ಕೆ ಭೇಟಿ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಹುಬ್ಬಳ್ಳಿ :
ಜುಲೈ 5ರಂದು ಕ್ಯಾಸಲ್​ರಾಕ್ ರೈಲ್ವೆ ರಕ್ಷಣಾ ಪಡೆಯ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಿ ದೂಧಸಾಗರ್ ಹಾಗೂ ಸೋನಾಲಿಯಂ ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ದಿಢೀರ್ ತಪಾಸಣೆೆ ನಡೆಸಲಾಯಿತು.
ಈ ವೇಳೆ ಅರಣ್ಯ ಮಾರ್ಗದಿಂದ ಅಸುರಕ್ಷಿತವಾಗಿ ರೈಲು ಹಳಿಗೆ ಪ್ರವೇಶಿಸಿ ದೂಧಸಾಗರ್ ಜಲಪಾತ ವೀಕ್ಷಣೆಯತ್ತ ಅಕ್ರಮವಾಗಿ ಚಾರಣ ನಡೆಸುತ್ತಿದ್ದ 32 ಪ್ರವಾಸಿಗರನ್ನು ಪತ್ತೆಹಚ್ಚಿ, ಅವರ ವಿರುದ್ಧ ರೈಲ್ವೆ ಕಾಯ್ದೆ ಅಡಿಯಲ್ಲಿ ಪ್ರತಿಯೊಬ್ಬರಿಂದ ತಲಾ 500 ರೂ.ನಂತೆ, ಒಟ್ಟು 16,000 ರೂ. ದಂಡ ವಸೂಲಿ ಮಾಡಲಾಗಿದೆ .
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದೂಧಸಾಗರ್ ಜಲಪಾತಕ್ಕೆ ಭೇಟಿ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಆದಾಗ್ಯೂ, ಮಳೆಗಾಲದಲ್ಲಿ ಕೆಲ ಪ್ರವಾಸಿಗರು ಅರಣ್ಯ ಮಾರ್ಗದಿಂದ ಗುಪ್ತವಾಗಿ ರೈಲು ಹಳಿಗೆ ಪ್ರವೇಶಿಸಿ, ಜಲಪಾತದತ್ತ ಚಾರಣ ನಡೆಸುತ್ತಿರುವುದು ಕಂಡುಬಂದಿದೆ.
ಇದರಿಂದ ರೈಲು ಸಂಚಾರದ ಸುರಕ್ಷತೆ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆರ್​ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಅಲೋಕಕುಮಾರ ಅವರ ದೂಧಸಾಗರ ಪ್ರದೇಶದಲ್ಲಿ ವಿಶೇಷ ನಿಗಾ ವಹಿಸಲಾಗಿದೆ.
ಪ್ರವಾಸಿಗರು ದೂಧಸಾಗರಕ್ಕೆ ಅನಧಿಕೃತವಾಗಿ ಪ್ರವೇಶಿಸದಂತೆ ಹಾಗೂ ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಮನವಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net