ಶೇ.56ರ ಮೀಸಲಾತಿ ಪರಿಗಣಿಸದಿದ್ದರೆ ಹೋರಾಟ reservation

reservation ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಧಾರವಾಡ ಜಿಲ್ಲಾ ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷ ಅಶೋಕ ವಾಲ್ಮೀಕಿ.
reservation ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧಾರವಾಡ ಜಿಲ್ಲಾ ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷ ಅಶೋಕ ವಾಲ್ಮೀಕಿ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ. 56ರ ಮೀಸಲಾತಿಯೇ ಇತ್ತು.
  • ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸಲಿಲ್ಲ.
  • ಕಾನೂನು ತಜ್ಞರ ಸಲಹೆ ಪಡೆಯಬೇಕು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ. 56ರ ಮೀಸಲಾತಿ ಅಡಿ ಹುದ್ದೆಗಳ ಭರ್ತಿ ನಿರ್ಧಾರವನ್ನು ಬಜೆಟ್ ಒಳಗಾಗಿ ಪ್ರಕಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್​ಟಿ ಮೀಸಲಾತಿಯ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸುವಾಗ ಶೇ. 56 ಮೀಸಲಾತಿಯೇ ಇತ್ತು.
ಸರ್ಕಾರ ಒಳಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ. 56ರ ಮೀಸಲಾತಿಯೇ ಇತ್ತು. ಈಗ ಏಕಾಏಕಿ ಶೇ.50ಕ್ಕೆ ಇಳಿಸಲಾಗಿದೆ.
ಮೀಸಲಾತಿಯನ್ನು ಶೇ.50ಕ್ಕೆ ಇಳಿಸುವಾಗ ಪರಿಶಿಷ್ಟ ವರ್ಗದ ನಾಯಕರನ್ನು, ಹೋರಾಟಗಾರರನ್ನು ಕಡೆಗಣನೆ ಮಾಡಲಾಗಿದೆ ಎಂದು ದೂರಿದರು.
ರಾಜ್ಯ ಎಸ್​ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿ, 2025ರ ಅಕ್ಟೋಬರ್​ನಲ್ಲಿ ರಾಜ್ಯ ಹೈಕೋರ್ಟ್ ಶೇ. 56 ಮೀಸಲಾತಿಗೆ ತಡೆ ನೀಡಿದೆ.
ಆದರೂ, ರಾಜ್ಯ ಸರ್ಕಾರ ತನ್ನ ನಿರ್ಧಾರದ ಪರವಾಗಿ ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೇ. 56ರ ಮೀಸಲಾತಿಯನ್ನು ಹೈ ಕೋರ್ಟ್​ನಲ್ಲಿ ಸಮರ್ಥವಾಗಿ ಮಂಡಿಸುವಲ್ಲಿ ಸೋತಿರುವ ರಾಜ್ಯಸರ್ಕಾರ ಒಳ ಮೀಸಲಾತಿಯಿಂದ ಹಿಂದೆ ಸರಿಯುವ ಭರದಲ್ಲಿ ಎಸ್​ಸಿ, ಎಸ್​ಟಿ ಮೀಸಲಾತಿ ಕಡಿತಗೊಳಿಸಿ ನೇಮಕಾತಿ ಆರಂಭಿಸಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸರ್ಕಾರ ತಕ್ಷಣ ಸರ್ವಪಕ್ಷಗಳ ಪ್ರಮುಖರ ಸಭೆ ಕರೆದು, ಈ ಕುರಿತು ರ್ಚಚಿಸಬೇಕು. ಕಾನೂನು ತಜ್ಞರ ಸಲಹೆ ಪಡೆಯಬೇಕು. ಯಾವುದೇ ಸಮುದಾಯಗಳಿಗೂ ಅನ್ಯಾಯ ಆಗದಂತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಹನಮಂತ ಹರಿವಾಣ, ಸಹದೇವ ಮಳಗಿ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net