festivals ನಂಬಿಕೆಯೇ ಹಬ್ಬದಾಚರಣೆಗೆ ಮೂಲ

festivals ಕುಂದಗೋಳ ತಾಲೂಕಿನ ಯಲಿವಾಳದಲ್ಲಿ ಏರ್ಪಡಿಸಿದ್ದ ಗುಳ್ಳವ್ವನ ಆಚರಣೆಯಲ್ಲಿ ಡಾ. ಸಂಗಮನಾಥ ಲೋಕಾಪೂರ, ಡಾ. ರಾಮು ಮೂಲಗಿ, ಪ್ರೊ. ಹಜರೇಸಾಬ ನದಾಫ್​, ಕುಬೇರಗೌಡ, ಇತರರು ಇದ್ದರು.
festivals ಕುಂದಗೋಳ ತಾಲೂಕಿನ ಯಲಿವಾಳದಲ್ಲಿ ಏರ್ಪಡಿಸಿದ್ದ ಗುಳ್ಳವ್ವನ ಆಚರಣೆಯಲ್ಲಿ ಡಾ. ಸಂಗಮನಾಥ ಲೋಕಾಪೂರ, ಡಾ. ರಾಮು ಮೂಲಗಿ, ಪ್ರೊ. ಹಜರೇಸಾಬ ನದಾಫ್​, ಕುಬೇರಗೌಡ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಸಂಗಮನಾಥ ಲೋಕಾಪೂರ ಅಭಿಮತ
  • ಯಲಿವಾಳದಲ್ಲಿ ಸಂಭ್ರಮದ ಗುಳ್ಳವ್ವನ ಉತ್ಸವ

ಹುಬ್ಬಳ್ಳಿ: festivals ಮೂಲ ನಂಬಿಕೆಗಳೆ ಬೇರೆ, ಮೂಢನಂಬಿಕೆಗಳೆ ಬೇರೆ. ಪರಂಪರೆಯ ಪ್ರೀತಿ ಮತ್ತು ಪ್ರಗತಿಯ ಒಲುಮೆಯನ್ನು ಪರಿಣಾಮಕಾರಿಯಾಗಿ ಬಿತ್ತುವ ಕಾರ್ಯ ಮೂಲ ನಂಬಿಕೆಗಳಿಂದ ಮಾತ್ರ ಸಾಧ್ಯ ಎಂದು ಸಾಹಿತಿ ಡಾ. ಸಂಗಮನಾಥ ಲೋಕಾಪೂರ ಹೇಳಿದರು.

ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಜನಪದರು ಜಾನಪದ ಜಗತ್ತು ಟ್ರಸ್ಟ್​, ಶ್ರೀ ಶಂಕರ ಪಾರ್ವತಿ ಮಹಿಳಾ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಹಬ್ಬ ಗುಳ್ಳವ್ವನ ನಾಲ್ಕನೇ ಸುತ್ತಿನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತವು ಹಬ್ಬಗಳನ್ನು ಆಚರಿಸುವ ದೇಶ. ಇಲ್ಲಿನ ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಅರ್ಥವಿದೆ, ಜೀವನ ಮಾರ್ಗವಿದೆ. ಬದುಕಿಗೆ ಸದಾಕಾಲವೂ ಒಳಿತನ್ನು ಬಯಸುವುದೇ ಹಬ್ಬಗಳ ಪ್ರಮುಖ ಉದ್ದೇಶ. ಗುಳ್ಳವ್ವನ ಆಚರಣೆಯನ್ನು ಕೇಂದ್ರವಾಗಿಟ್ಟುಕೊಂಡು ಹಬ್ಬಗಳ ಮಹತ್ವವನ್ನು ಅವರು ತಿಳಿಸಿದರು.
ಜಾನಪದ ಕಲಾವಿದ ಡಾ. ರಾಮೂ ಮೂಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುಳ್ಳವ್ವನ ಆಚರಣೆ ಹಾಗೂ ಆಕೆಯ ಮೇಲಿನ ಮೂಲ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ, ಗ್ರಾಮೀಣ ಜನರಿಗೆ ಜನಪದ ರಸದೌತಣ ನೀಡಿದರು.
ಜಾನಪದ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಹಜರೇಸಾಬ ನದಾಫ್​, ಕಲಾವಿದ ಕುಬೇರಗೌಡ, ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಬಾಗಲ, ಎಸ್​.ಎಸ್​. ಮುಗಳಿ, ಡಾ. ಬಸಮ್ಮಾ ಹಮ್ಮಿಣಿ, ಗಿರಿಜಾ ಮುಗಳಿ, ಮಂಜುಳಾ ಕಾಮಧೇನು ಭಾಗವಹಿಸಿದ್ದರು.
ಶಿಕ್ಷಕ ಶಿವಾನಂದ ಒಂಭತ್ತುರೊಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net