Fertilizer uses ರಸಗೊಬ್ಬರ ಬಳಕೆ ಕುರಿತು ಕಾರ್ಯಾಗಾರ

Fertilizer uses ಧಾರವಾಡದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಜಿಪಂ ಸಿಇಒ ಭುವನೇಶ ಪಾಟೀಲ ಉದ್ಘಾಟಿಸಿದರು. ಮಂಜುನಾಥ ಅಂತರವಳ್ಳಿ, ಡಾ. ಬಸವರಾಜ ಏಣಗಿ, ಬಾಳಪ್ಪ ಬೆಳಕೊಡ, ಮಲ್ಲನಗೌಡ ಪಾಟೀಲ, ಅರವಿಂದ ಕಟಗಿ ಇತರರು ಇದ್ದರು.
Fertilizer uses ಧಾರವಾಡದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಜಿಪಂ ಸಿಇಒ ಭುವನೇಶ ಪಾಟೀಲ ಉದ್ಘಾಟಿಸಿದರು. ಮಂಜುನಾಥ ಅಂತರವಳ್ಳಿ, ಡಾ. ಬಸವರಾಜ ಏಣಗಿ, ಬಾಳಪ್ಪ ಬೆಳಕೊಡ, ಮಲ್ಲನಗೌಡ ಪಾಟೀಲ, ಅರವಿಂದ ಕಟಗಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾವಯವ ಕೃಷಿಗೆ ಆದ್ಯತೆ ನೀಡಲು ಸಲಹೆ
  • ಕೃಷಿಕ ಸಮಾಜದಿಂದ ಆಯೋಜನೆ
ಹುಬ್ಬಳ್ಳಿ: Fertilizer uses ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ವತಿಯಿಂದ ಧಾರವಾಡದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರಸಗೊಬ್ಬರ ಕೊರತೆ ನಿರ್ವಹಣೆ ಹಾಗೂ ಪರ್ಯಾಯ ವ್ಯವಸ್ಥೆ ಕುರಿತು ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಅತಿಥಿಯಾಗಿದ್ದ ಜಿಪಂ ಸಿಇಒ ಭುವನೇಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಕೇವಲ ರಾಸಾಯನಿಕ ಗೊಬ್ಬರ ಬಳಸದೇ ಮಣ್ಣು ಪರೀಕ್ಷೆ ಆಧಾರದ ಮೇಲೆ ಸಾವಯವ ಕೃಷಿಯೊಂದಿಗೆ ಸಮತೋಲಿತ ಗೊಬ್ಬರ ಬಳಸಲು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೂ ಉತ್ತಮ ಮಳೆಯಾಗದೇ ಕೊರತೆಯಾಗಿದ್ದು, ಹವಾಮಾನಕ್ಕೆ ಅನುಗುಣವಾಗಿ ವಿಜ್ಞಾನಿಗಳ ಸಲಹೆಯನ್ನು ಪಡೆದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಬೇಸಾಯಶಾಸ್ತ್ರಜ್ಞ ಡಾ. ಬಸವರಾಜ ಏಣಗಿ ಉಪನ್ಯಾಸ ನೀಡಿ, ರೈತರು ಆಧುನಿಕತೆಯ ಭರದಲ್ಲಿ ಮೂಲ ಕೃಷಿ ಮರೆಯಬಾರದು. ಡಿಎಪಿ, ಯೂರಿಯಾ ಗೊಬ್ಬರಗಳಿಗೆ ಅವಲಂಬಿತವಾಗದೇ ಪರ್ಯಾಯ ಗೊಬ್ಬರಗಳ ಬಳಕೆಗೆ ಸಲಹೆ ನೀಡಿದರು.
ಉಪ ಕಸುಬುಗಳಾದ ಹೈನುಗಾರಿಕೆ, ಆಡು, ಕುರಿ, ಕೋಳಿ ಸಾಕಾಣಿಕೆ ಕೈಗೊಂಡು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಣ್ಣು ವಿಜ್ಞಾನಿ ಡಾ. ಪಲ್ಲವಿ ಮಾತನಾಡಿ, ಮಣ್ಣು ಪರೀಕ್ಷೆ ಮಾಡದೇ ಯಥೇಚ್ಚ ರಾಸಾಯನಿಕ ಗೊಬ್ಬರ ಬಳಸಿದರೆ ಮಣ್ಣಿನ ಗುಣಧರ್ಮ, ಫಲವತ್ತತೆ ಹಾಳಾಗುವುದು, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಶಿಫಾರಿತ ಪ್ರಮಾಣದ ಕೊಟ್ಟಿಗೆ ಗೊಬ್ಬರ ಉಪಯೋಗಿಸುವುದು ಒಳಿತು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net