prices ಬೆಂಬಲ ಬೆಲೆಯಿಂದ ರೈತರಿಗೆ ಅನುಕೂಲ

ಅಣ್ಣಿಗೇರಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ  ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಮಂಗಳವಾರ ಚಾಲನೆ ನೀಡಿದರು
ಅಣ್ಣಿಗೇರಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಮಂಗಳವಾರ ಚಾಲನೆ ನೀಡಿದರು
Published on
ಅಣ್ಣಿಗೇರಿ: ಸ್ಥಳೀಯ ಕೃಷಿ ಉತ್ಪನ್ನ (prices) ಮಾರುಕಟ್ಟೆ ಸಮಿತಿ ಆವರಣದಲ್ಲಿ ಬೆಲೆ ಸರ್ಕಾರದ ಬೆಂಬಲ ಯೋಜನೆಯಡಿ ಕಡಲೆ ಕಾಳು ಖರೀದಿಯ ಮೂರು ಕೇಂದ್ರಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ಮಂಗಳವಾರ ಚಾಲನೆ ನೀಡಿದರು.
ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ. ಇದರಿಂದ ರೈತರಿಗೆ ಸಮರ್ಪಕ ಬೆಲೆ ದೊರೆಯಲಿದೆ ಎಂದು ಹೇಳಿದರು.
ನೂತನ ತಾಲೂಕು ಕೃಷಿಕ ಸಮಾಜದ ಕಟ್ಟಡಕ್ಕೆ ಪುರಸಭೆ ನಿವೇಶನವನ್ನು ಬಾಡಿಗೆ ರೂಪದಲ್ಲಿ ನೋಂದಣಿ ಮಾಡಿಸಿ ದಾಖಲೆಯನ್ನು ರೈತ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು. ಪಟ್ಟಣದಲ್ಲಿ ಬಾಕಿ ಉಳಿದ ನವಲಗುಂದ ಚಕ್ಕಡಿ ರಸ್ತೆ ದುರಸ್ತಿ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಕೃಷಿ ಸಮಾಜದ ಅಧ್ಯಕ್ಷ ಎ.ಪಿ.ಗುರಿಕಾರ, ಅಪ್ಪಣ್ಣ ಬಾಗಿ, ಚಂಬಣ್ಣ ಹಾಳದೋಟರ, ನಿಜಗುಣೆಪ್ಪ ಅಕ್ಕಿ,ಬಸನಗೌಡ ಕುರಹಟ್ಟಿ, ಪ್ರಕಾಶ ಅಂಗಡಿ, ಹನಮಂತಪ್ಪ ಕಂಬಳಿ, ಭಗವಂತಪ್ಪ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಪ್ರದೀಪ ಲೇಂಕನಗೌಡರ, ಕೃಷ್ಣಗೌಡ ಮಾಡಳ್ಳಿ, ಲಕ್ಷ್ಮಣ ಮುದಕನಾಯಕರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net