ಪರಿಹಾರ ಸಿಗದೆ ಜಮೀನು ನೇಗಿಲು ಹೊಡೆದ ರೈತ

ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಕೆಎಚ್​ಬಿ ಲೇಔಟ್​ನಲ್ಲಿ ಟ್ರ್ಯಾಕ್ಟರ್​ ನೇಗಿಲು ಹೊಡೆಯುತ್ತಿರುವ ರೈತ.
ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಕೆಎಚ್​ಬಿ ಲೇಔಟ್​ನಲ್ಲಿ ಟ್ರ್ಯಾಕ್ಟರ್​ ನೇಗಿಲು ಹೊಡೆಯುತ್ತಿರುವ ರೈತ.
Published on
ಧಾರವಾಡ: ಕರ್ನಾಟಕ ಗೃಹಮಂಡಳಿಯಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ನೊಂದ ರೈತ ಟ್ರ್ಯಾಕ್ಟರ್​ ಬಳಸಿ ನೇಗಿಲು ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ!
ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ಉಳವಪ್ಪ ಒಡೆಯರ ಕೆಎಚ್​ಬಿ ವಿರುದ್ಧ ತೊಡೆ ತಟ್ಟಿರುವ ರೈತ. ಇವರ ತಂದೆ ದ್ಯಾಮಪ್ಪ ಒಡೆಯರ ಮಾಲೀಕತ್ವದಲ್ಲಿ 5 ಎಕರೆ 12 ಗುಂಟೆ ಜಮೀನಿತ್ತು. 2005- 06ರಲ್ಲಿ ನಿವೇಶನ ಅಭಿವೃದ್ಧಿಪಡಿಸಲು ಗೃಹಮಂಡಳಿ ಜಮೀನು ಸ್ವಾಧಿನಪಡಿಸಿಕೊಳ್ಳಲಾಗಿತ್ತು. ಆದರೆ, ತಮಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅಲ್ಲದೆ, ಜಮೀನು ಅಭಿವೃದ್ಧಿಪಡಿಸಿದ ನಂತರ ವಾಗ್ದಾನದಂತೆ ತಮಗೆ ನಿವೇಶನಗಳನ್ನೂ ನೀಡಿಲ್ಲ ಎಂಬುದು ರೈತ ಉಳವಪ್ಪ ಒಡೆಯರ ಆರೋಪ.
ತಮಗೆ ಸಿಗಬೇಕಾದ ಪರಿಹಾರಕ್ಕಾಗಿ ಉಳವಪ್ಪ ಕೆಎಚ್​ಬಿ ಕಚೇರಿಗೆ ವರ್ಷಗಟ್ಟಲೇ ಅಲೆದಾಡಿದ್ದಾರೆ. ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದ್ದರಿಂದ ನೇಗಿಲು ಹೊಡೆದಿದ್ದೇನೆ ಎಂದು ಉಳವಪ್ಪ ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net