farmer demand ಶಾಸಕರ ಪರ ರೈತರ ಮನವಿ

farmer demand ಹುಬ್ಬಳ್ಳಿ ತಾಲೂಕು ರೈತ ಸಂಘದ ವತಿಯಿಂದ ಶುಕ್ರವಾರ ಶಾಸಕ ಪ್ರಸಾದ ಅಬ್ಬಯ್ಯ ಪರ ರೈತರು ತಹಸೀಲ್ದಾರ್​ ಕಚೇರಿ ಎದುರು ಘೊಷಣೆ ಮೊಳಗಿಸಿದರು.
farmer demand ಹುಬ್ಬಳ್ಳಿ ತಾಲೂಕು ರೈತ ಸಂಘದ ವತಿಯಿಂದ ಶುಕ್ರವಾರ ಶಾಸಕ ಪ್ರಸಾದ ಅಬ್ಬಯ್ಯ ಪರ ರೈತರು ತಹಸೀಲ್ದಾರ್​ ಕಚೇರಿ ಎದುರು ಘೊಷಣೆ ಮೊಳಗಿಸಿದರು.
Published on
ಹುಬ್ಬಳ್ಳಿ: farmer demand ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನೂರಾರು ರೈತರು ತಹಸೀಲ್ದಾರ್​ ಕಚೇರಿಗೆ ಆಗಮಿಸಿ ಅಬ್ಬಯ್ಯ ಪರ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.
ಜನಪರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಜನನಾಯಕ, ಎಲ್ಲ ಸಮುದಾಯಗಳ ಏಳ್ಗೆಗೆ ಶ್ರಮಿಸುವ ಅಬ್ಬಯ್ಯ ಅವರು ಸತತ ಮೂರನೇ ಬಾರಿ ಶಾಸಕರಾಗಿದ್ದಾರೆ.
ಅವರಿಗೆ ಸಂಪುಟದಲ್ಲಿ ಅವಕಾಶ ನೀಡಿ ಇನ್ನಷ್ಟು ಜನರ ಸೇವೆ ಮಾಡಲು ಅವಕಾಶ ನೀಡಬೇಕೆಂದು ರೈತ ಸಂದ ಅಧ್ಯಕ್ಷ ಸಿದ್ದಪ್ಪ ಮೀಸಿ, ಉಪಾಧ್ಯಕ್ಷ ಕೀರಗೌಡ ಪಾಟೀಲ ಇತರರು ಆಗ್ರಹಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ತಹಸೀಲ್ದಾರ್​ ಮೂಲಕ ಮನವಿ ಮಾಡಿದರು.
ಸಂಘದ ಕೋಶಾಧ್ಯಕ್ಷ ಅಡಿವೆಪ್ಪ ನಂದಿಹಳ್ಳಿ, ಗುರುಸಿದ್ದಪ್ಪ ಕಟಗಿ, ಚನ್ನಬಸಪ್ಪ ಅಸುಂಡಿ, ವೀರಭದ್ರಪ್ಪ ಮೇಟಿ, ಮೋಹನ ಅಸುಂಡಿ, ಬಸವರಾಜ ಮುದಣ್ಣವರ, ಕರಗಣ್ಣವರ, ವೀರಣ್ಣ ಸಿಂತ್ರಿ, ಸಿದ್ದಪ್ಪ ಮುದಣ್ಣವರ, ವಿರುಪಾಕ್ಷಪ್ಪ ಕುಸುಗಲ್ಲ, ಪರುತಪ್ಪ ಬಳಗಣ್ಣವರ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net