ಡಿಸಿ ವಾಟ್ಸಾಪ್​ನ ನಕಲಿ ಅಕೌಂಟ್​ ಮಾಡಿ ಹಣಕ್ಕೆ ಬೇಡಿಕೆ

ಜಿಲ್ಲಾಧಿಕಾರಿ ಆರ್​. ಸ್ನೇಹಲ್
ಜಿಲ್ಲಾಧಿಕಾರಿ ಆರ್​. ಸ್ನೇಹಲ್
Published on
ಧಾರವಾಡ: ಜಿಲ್ಲಾಧಿಕಾರಿ ಆರ್​. ಸ್ನೇಹಲ್​ ಅವರ ವಾಟ್ಸಾಪ್​ನ ನಕಲಿ ಅಕೌಂಟ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೇರೆ ನಂಬರ್​ಗೆ ಡಿಸಿ ಅವರ ಫೋಟೋ ಇಟ್ಟಿರುವ ಕಿಡಿಗೇಡಿಗಳು ವಾಟ್ಸಾಪ್​​ ಮೂಲಕ ಮೆಸೇಜ್​ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇತರರಿಂದ ಈ ಸುದ್ದಿ ತಿಳಿದ ಜಿಲ್ಲಾಧಿಕಾರಿ, ಸೈಬರ್​ ಠಾಣೆಗೆ ದೂರು ನೀಡಿದ್ದಾರೆ. ಯಾರೂ ಈ ರೀತಿಯ ಸಂದೇಶಕ್ಕೆ ಸ್ಪಂದಿಸಬೇಡಿ ಎಂದು ವಾಟ್ಸಾ ್ಯಪ್​ ಸ್ಟೇಟಸ್​ ಹಾಕಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net