ಧಾರವಾಡ: ಧಾರವಾಡ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶರ ಇ-ಮೇಲ್ ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ನ್ಯಾಯಾಲಯದ ಕಲಾಪಗಳು ಸ್ಥಗಿತಗೊಂಡಿವೆ. ಜನರನ್ನು ಹೊರಗೆ ಕಳಿಸಲಾಗಿದೆ. ಶ್ವಾನ ದಳ ಮತ್ತು ವಿಧ್ವಂಸಕ ಕೃತ್ಯ ತಪಾಸಣೆ ತಂಡದವರು ತಪಾಸಣೆ ನಡೆಸುತ್ತಿದ್ದಾರೆ.
karunanidhi.kundi@underworld.dog ಇ-ಮೇಲ್ ನಿಂದ ಸಂದೇಶ ಬಂದಿದೆ. ಸಂದೇಶದ ಕೊನೆಯಲ್ಲಿ 'ಜೈ ಕನಿಮೊಳಿ' ಎಂದು ಬರೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.