ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್​ ಸಂದೇಶ

ಬಾಂಬ್​ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಪೊಲೀಸರ ತಪಾಸಣೆ
ಬಾಂಬ್​ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಪೊಲೀಸರ ತಪಾಸಣೆ
Published on
ಧಾರವಾಡ: ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಮತ್ತೆ ಹುಸಿ ಬಾಂಬ್​ ಬೆದರಿಕೆ ಸಂದೇಶ ಇ- ಮೇಲ್​ ಬಂದಿದೆ. ಜೂ. 19ರಂದು ಇದೇ ನ್ಯಾಯಾಲಯಕ್ಕೆ ಬಾಂಬ್​ ಸ್ಫೋಟಿಸುವ ಬೆದರಿಕೆ ಇ- ಮೇಲ್​ ಸಂದೇಶ ಬಂದಿತ್ತು. ಇದಕ್ಕೂ ಮುಂಚೆ 2 ಬಾರಿ ಬಾಂಬ್​ ಬೆದರಿಕೆ ಸಂದೇಶ ಬಂದಿತ್ತು.
ಗುರುವಾರ ಬೆಳಗ್ಗೆ ಜೆನ್​ ಜಿ ಡಿಎಂಕೆ ನಾಯಕ ಎಂದು ಹೆಸಸಿರುವ ವ್ಯಕ್ತಿ ಪಿಡಿಜೆ ಧಾರವಾಡ ಐಡಿಗೆ ಮೇಲ್​ ಮಾಡಿದ್ದ. ಅದನ್ನು ಗಮನಿಸಿದ ಕೋರ್ಟ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬಾಂಬ್​ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತಪಾಸಣೆ ನಡೆಸಿದರು. ನ್ಯಾಯಾಲಯದಲ್ಲಿ ಸ್ಫೋಟಕ ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಸಂದೇಶ ಎಂದು ಖಚಿತಪಡಿಸಿಕೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net