ರೈಲು ಸಂಚಾರದ ಅವಧಿ ವಿಸ್ತರಣೆ time

time ಯಶವಂತಪುರ- ವಿಜಯಪುರ ವಿಶೇಷ ಎಕ್ಸ್​ಪ್ರೆಸ್ ರೈಲು
time ಯಶವಂತಪುರ- ವಿಜಯಪುರ ವಿಶೇಷ ಎಕ್ಸ್​ಪ್ರೆಸ್ ರೈಲು
Published on
ಹುಬ್ಬಳ್ಳಿ
ಪ್ರತಿ ಶನಿವಾರ ಮತ್ತು ಸೋಮವಾರದಂದು ಯಶವಂತಪುರದಿಂದ ಸಂಚಾರ ಆರಂಭಿಸುವ ಈ ರೈಲಿನ ಅವಧಿಯನ್ನು ಈ ಮೊದಲು ಜೂನ್ 29ರವರೆಗೆ ನಿಗದಿಪಡಿಸಲಾಗಿತ್ತು.
ಇದೀಗ ಈ ರೈಲು ಇದೇ ವರ್ಷದ ಜುಲೈ 4 ರಿಂದ ಆಗಷ್ಟ್ 31ರವರೆಗೆ ಸಂಚಾರ ಮುಂದುವರೆಸಲಿದೆ. (ಆಗಷ್ಟ್ 1 ಮತ್ತು 3 ರಂದು ರೈಲು ಸಂಚರಿಸುವುದಿಲ್ಲ.
ಮತ್ತೊಂದಡೆ ಪ್ರತಿ ಭಾನುವಾರ ಮತ್ತು ಮಂಗಳವಾರಗಳಂದು ವಿಜಯಪುರದಿಂದ ಹೊರಡುವ ಈ ರೈಲು ವಿಜಯಪುರ- ಯಶವಂತಪುರ ವಿಶೇಷ ಎಕ್ಸ್​ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ಈ ಮೊದಲು ಜೂನ್ 30ರವರೆಗೆ ನಿಗದಿಪಡಿಸಲಾಗಿತ್ತು.
ಇದೀಗ ಈ ರೈಲು ಸಂಚಾರದ ಅವಧಿ ಜುಲೈ 5 ರಿಂದ ಸೆಪ್ಟೆಂಬರ್ 1 ರವರೆಗೆ ವಿಸ್ತರಣೆಗೊಂಡಿದೆ. (ಆಗಷ್ಟ್ 2 ಮತ್ತು 4 ರಂದು ರೈಲು ಸಂಚಾರ ಇರುವುದಿಲ್ಲ.
ಈ ರೈಲುಗಳ ಸಂಚಾರದ ವೇಳಾಪಟ್ಟಿ, ನಿಲುಗಡೆ ಹಾಗೂ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net