ಸಚಿವ ಸ್ಥಾನದ ಅರ್ಹತೆ ಎಲ್ಲರಿಗೂ ಇದೆ positions

positions ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್.
positions ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸಂತೋಷ ಲಾಡ್ ಹೇಳಿಕೆ
  • ರೈತರು ಮಧ್ಯಂತರ ಪರಿಹಾರ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ
  • ಬೆಳೆವಿಮೆ ನಿಯಮಾವಳಿಗಳು ಬದಲಾಗಬೇಕು.

ಹುಬ್ಬಳ್ಳಿ :

positions ಸಚಿವ ಸ್ಥಾನ ವಂಚಿತರಿಗೆ ಅರ್ಹತೆ ಇಲ್ಲವೆಂದು ಭಾವಿಸಬಾರದು. ಎಲ್ಲ ಶಾಸಕರಿಗೂ ಸಚಿವ ಸ್ಥಾನ ಅಲಂಕರಿಸುವ ಅರ್ಹತೆ ಇದೆ. ನಾನು ಈ ವಿಚಾರದಲ್ಲಿ ಅದೃಷ್ಟವಂತ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಸಚಿವರಾದ ನಂತರ ಬುಧವಾರ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎರಡ್ಮೂರು ದಿನಗಳಲ್ಲಿ ಖಾತೆ ಹಂಚಿಕೆ ಆಗಬಹುದು. ಯಾವುದೇ ಖಾತೆ ಕೊಟ್ಟರೂ ಸಂತೋಷದಿಂದ ನಿರ್ವಹಿಸುತ್ತೇನೆ ಎಂದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಎಲ್ಲ ಸಚಿವರಿಗೆ ಬರ ವೀಕ್ಷಣೆ ಮಾಡಲು ತಾಕೀತು ಮಾಡಿದ್ದು, ಅದರನ್ವಯ ಎಲ್ಲ ತಾಲೂಕುಗಳಿಗೆ ಹೋಗಿ ಬರ ಅಧ್ಯಯನ ಮಾಡಿ ವರದಿ ನೀಡುತ್ತೇವೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕೇಂದ್ರದಿಂದ ನಮಗೆ ಬರಗಾಲಕ್ಕಾಗಿ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ. ಈ ಮಧ್ಯೆ ಬಿಜೆಪಿಯವರು ಬರ ಅಧ್ಯಯನ ಮಾಡುತ್ತಿರುವುದು ಒಳ್ಳೆಯದು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮೊದಲಿನಿಂದಲೂ ಕಾಂಗ್ರೆಸ್ ಆಡಳಿತದ ರಾಜ್ಯಗಳೊಂದಿಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ದೂರಿದರು.

ಬೆಳೆವಿಮೆ ನಿಯಮಾವಳಿಗಳು ಬದಲಾಗಬೇಕು. ರೈತರು ಮಧ್ಯಂತರ ಪರಿಹಾರ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಝೆನ್ ಜಿಯಿಂದ ಹೊಸ ಬದಲಾವಣೆಗಳು ಆಗುತ್ತಿವೆ. ಬಿಜೆಪಿಯವರು ಪಾರದರ್ಶಕವಾಗಿ ಚುನಾವಣೆ ನಡೆಸಿದರೆ ಖಂಡಿತ ಸೋಲುತ್ತಾರೆ. ಹೀಗಾಗಿ, ನ್ಯಾಯಯುತ ಚುನಾವಣೆ ನಡೆಸಲು ಅವರು ಬಿಡುತ್ತಿಲ್ಲ ಎಂದರು.

ಜನಸಾಮಾನ್ಯರ ಸಮಸ್ಯೆಗಳಿಗೆ, ಅವರ ಪ್ರಶ್ನೆಗಳಿಗೆ ಉತ್ತರಿಸಿದ ಬಿಜೆಪಿಯವರು, ಬರೀ ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.

ದೇಶದ ಪ್ರಧಾನಿ ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಪಿಎಂ ರಿಲೀಫ್ ಫಂಡ್​ಗೆ ನೀಡಿದ 20 ಸಾವಿರ ಕೋಟಿ ರೂ. ಬಗ್ಗೆ ಉತ್ತರ ನೀಡುತ್ತಿಲ್ಲ. ಹಾಗಾದರೆ ಆ ದುಡ್ಡಿನ ಬಗ್ಗೆ ಯಾರು ಕೇಳಬೇಕು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಕಾಂಗ್ರೆಸ್​ನ 70 ವರ್ಷದ ಲೆಕ್ಕ ಕೇಳುತ್ತಾರೆ, ಆದರೆ, 20 ಸಾವಿರ ಕೋಟಿ ರೂ. ಬಗ್ಗೆ ಇಲ್ಲಿಯವರೆಗೆ ಉತ್ತರ ನೀಡುತ್ತಿಲ್ಲ. ಇಡೀ ದೇಶವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದೊಡ್ಡ ಅಭಿವೃದ್ಧಿ ಆಗಿದೆಯೆಂದು ಬಿಂಬಿಸುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net