ಈ ವೇಳೆ ನಬಾರ್ಡ್ ಎಜಿಎಂ ಮಯೂರ್ ಕಾಂಬಳೆ ಮಾತನಾಡಿ, ಸಾಲದ ಸಾಮರ್ಥ್ಯವನ್ನು ಎಂಎಸ್‌ಎಂಇ ವಲಯಕ್ಕೆ ಸರಿಸುಮಾರು ಶೇ. 44, ಕೃಷಿ ವಲಯಕ್ಕೆ ಶೇ. 41.5 ಮತ್ತು ಶಿಕ್ಷಣ, ವಸತಿ, ನವೀಕರಿಸಬಹುದಾದ ಇಂಧನ, ಸಾಮಾಜಿಕ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿಗೆ ಶೇ. 14.5 ಎಂದು ಅಂದಾಜಿಸಲಾಗಿದೆ ಎಂದರು. ರೈತರ ಆದಾಯ ಸುಧಾರಿಸಲು ಕೃಷಿ ಯಾಂತ್ರೀಕರಣ, ಆಹಾರ ಸಂಸ್ಕರಣೆ, ಕೊಯ್ಲು ನಂತರದ ನಿರ್ವಹಣೆ ಮತ್ತು ನೀರು ಕೊಯ್ಲು ರಚನೆಗಳು ಸೇರಿ ಕೃಷಿ ಕ್ಷೇತ್ರದ ಅಡಿಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಒತ್ತು ನೀಡಲಾಗಿದೆ ಎಂದರು.