epfo meet ಪಿಎಫ್ ಕಚೇರಿಗಳ ದಕ್ಷತೆ ಪರಿಶೀಲನೆ

epfo meet ಹುಬ್ಬಳ್ಳಿಯ ಇಪಿಎಫ್​ ವಲಯ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ- ಗೋವಾ ವಲಯದ ಹೆಚ್ಚುವರಿ ಪಿಎಫ್ ಆಯುಕ್ತ ಜಯಕುಮಾರ ನೇತೃತ್ವದಲ್ಲಿ ಸಭೆ ನಡೆಯಿತು.
epfo meet ಹುಬ್ಬಳ್ಳಿಯ ಇಪಿಎಫ್​ ವಲಯ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ- ಗೋವಾ ವಲಯದ ಹೆಚ್ಚುವರಿ ಪಿಎಫ್ ಆಯುಕ್ತ ಜಯಕುಮಾರ ನೇತೃತ್ವದಲ್ಲಿ ಸಭೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಆಯುಕ್ತ ಜಯಕುಮಾರ ಸಭೆ
  • ಆರ್ಥಿಕ ವರ್ಷದ ಮೊದಲ ಒ ಆ್ಯಂಡ್​ ಎಂ
ಹುಬ್ಬಳ್ಳಿ: epfo meet ಇಲ್ಲಿಯ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್ಒ) ವಲಯ ಕಚೇರಿಯಲ್ಲಿ 2026- 27ನೇ ಆರ್ಥಿಕ ವರ್ಷದ ಮೊದಲ ಒ ಆ್ಯಂಡ್ ಎಂ ಸಭೆಯು ಶುಕ್ರವಾರ ಕರ್ನಾಟಕ ಮತ್ತು ಗೋವಾ ವಲಯದ ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ ಜಯಕುಮಾರ ಅಧ್ಯಕ್ಷತೆಯಲ್ಲಿ ಜರುಗಿತು.
ಹುಬ್ಬಳ್ಳಿ ವಲಯ ವ್ಯಾಪ್ತಿಯಲ್ಲಿರುವ ಕರ್ನಾಟಕ ಮತ್ತು ಗೋವಾ ರಾಜ್ಯಗಳ ವಿವಿಧ ಜಿಲ್ಲೆಗಳ 10 ಪ್ರಾದೇಶಿಕ ಕಚೇರಿಗಳ ಉಸ್ತುವಾರಿ ಆಯುಕ್ತರು ಭಾಗವಹಿಸಿದ್ದರು.
ಎಲ್ಲ ಪ್ರಾದೇಶಿಕ ಕಚೇರಿಗಳ ಕಾರ್ಯಕ್ಷಮತೆ, ದಕ್ಷತೆಯನ್ನು ಸಮಗ್ರ ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಲಾಯಿತು. ಗ್ರಾಹಕರಿಗೆ ಸೇವೆ ವಿತರಣೆಯಲ್ಲಿನ ಸುಧಾರಣೆ, ದಾವೆಗಳ ಸಮಯೋಚಿತ ತೀರ್ಮಾನ, ಅಹವಾಲುಗಳ ಆಲಿಕೆ ಹಾಗೂ ಪರಿಹಾರ.
ಅನುಸರಣೆ ಮತ್ತು ಜಾರಿಗೆ ಸಂಬಂಧಿಸಿದ ಚಟುವಟಿಕೆಗಳು, ಬಾಕಿ ಪಾವತಿಗಳ ವಸೂಲಿ, ಪಿಂಚಣಿ ಸಂಬಂಧಿತ ಸೇವೆಗಳು, ಕಾನೂನು ವಿಚಾರಗಳು ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡುವ ಬಗ್ಗೆ ಚರ್ಚಿಸಲಾಯಿತು.
ಪ್ರಸ್ತುತ ವರ್ಷದ ಗುರಿಗಳನ್ನು ಸಾಧಿಸಲು ರೂಪುರೇಷೆಗಳನ್ನು ಚರ್ಚಿಸಲಾಯಿತು. ಪ್ರಾದೇಶಿಕ ಕಚೇರಿಗಳು ತಮ್ಮ ಸಮಸ್ಯೆ, ಸವಾಲುಗಳನ್ನು ಮಂಡಿಸಲು ಮತ್ತು ಸಂಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಕ್ರಮಗಳನ್ನು ಹಿರಿಯ ಅಧಿಕಾರಿಗಳು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net