ದಿನ ಬಳಕೆಯಲ್ಲಿ ಸಿಗುವ ಕಚ್ಚಾ ವಸ್ತುಗಳನ್ನು ಮರು ಬಳಕೆ ಮಾಡಿ ತಯಾರಿಸಿದ ವಸ್ತುಗಳು, ಬತ್ತದ ಹುಲ್ಲು, ಇತರೆ ವಸ್ತುಗಳಿಂದ ತಯಾರಿಸಿದ ಅಲಂಕಾರಿಕ ಸಾಮಗ್ರಿ, ಪಾತ್ರೆಗಳು, ಬೊಗಾಣಿ, ಪೆನ್ನು, ಹಾಳೆ, ವೇಸ್ಟ್ ಡ್ರಮ್ ಬಳಸಿ ತಯಾರಿಸಲಾದ ಟೇಬಲ್‌ಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಯು.ಬಿ.ಎ. ಸಯೋಜಕ ಡಾ. ಚೇತನ್ ಜೆ.ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಸಂಗೀತಾ ಮಾನೆ, ಪತ್ರಿಕೋದ್ಯಮ ವಿಭಾಗದ ಪ್ರೊ. ಜೆ.ಎಂ. ಚಂದುನವರ, ನವೀನ ಮೀರಾಸಿ, ಡಾ. ಮನೋಜ ಡೊಳ್ಳಿ, ಡಾ. ಕಿರಣ ಬನ್ನಿಗೋಳ, ಡಾ. ಪ್ರಶಾಂತ ಇತರರಿದ್ದರು.