ಚಿತ್ರಗಳಲ್ಲಿ ಮೂಡಿಬಂದ ಪರಿಸರ ಕಾಳಜಿ concerns

concerns ವಿಶ್ವ ಪರಿಸರ ದಿನದ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಕ್ಕಳೊಂದಿಗೆ ಅತಿಥಿಗಳಾದ ಬಿಇಒ ಎಚ್.ಎಂ. ಫಡ್ನೇಶಿ, ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೆಕರ, ನಮ್ಮ ಕಿಚನ್ ಮಾಲೀಕ ಆಲಫಿನ್ ಹಾಗೂ ನಿರ್ಣಾಯಕರು ಇದ್ದಾರೆ.
concerns ವಿಶ್ವ ಪರಿಸರ ದಿನದ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಕ್ಕಳೊಂದಿಗೆ ಅತಿಥಿಗಳಾದ ಬಿಇಒ ಎಚ್.ಎಂ. ಫಡ್ನೇಶಿ, ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೆಕರ, ನಮ್ಮ ಕಿಚನ್ ಮಾಲೀಕ ಆಲಫಿನ್ ಹಾಗೂ ನಿರ್ಣಾಯಕರು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ಆಯೋಜಿಸಿದ್ದ ಸ್ಪರ್ಧೆಗೆ ವ್ಯಾಪಕ ಸ್ಪಂದನೆ
  • ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಮೆಚ್ಚುಗೆ ಮಹಾಪೂರ
  • ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶ
ಹುಬ್ಬಳ್ಳಿ :
concerns ವಿಶ್ವ ಪರಿಸರ ದಿನದ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಇಲ್ಲಿನ ಲ್ಯಾಮಿಂಗ್ಟನ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮೆಲ್ಲರ ಭವಿಷ್ಯಕ್ಕಾಗಿ ಪ್ರಕೃತಿಯನ್ನು ರಕ್ಷಿಸೋಣ’ ವಿಷಯ ಕುರಿತ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.
7ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಮೂರು ವಿಭಾಗದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 800ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಪಾಲಕರು ತಮ್ಮ ಮಕ್ಕಳನ್ನು ಉತ್ಸಾಹದಿಂದ ಕರೆದುಕೊಂಡು ಬರುವ ಮೂಲಕ ಬೆಂಬಲಿಸಿದರು.
ಭೂಮಿಯ ರಕ್ಷಣೆ, ಸಸಿ ನೆಟ್ಟು ಬೆಳೆಸುವುದು, ಮನೆ ಸುತ್ತ ಗಿಡಗಳು ಇರುವುದು ಸೇರಿದಂತೆ ತರಹೇವಾರಿ ಚಿತ್ರಗಳು ಮಕ್ಕಳಿಂದ ಮೂಡಿಬಂದವು. ಅನೇಕ ಮಕ್ಕಳು ಪಾಲಕರೊಂದಿಗೆ ಬಂದು ತಾವು ತಂದಿದ್ದ ಸ್ಕೆಚ್ ಪೆನ್, ಪೇಂಟ್, ಪೆನ್ಸಿಲ್​ಗಳಿಂದ ಆಕರ್ಷಕ ಚಿತ್ರಗಳನ್ನು ಬಿಡಿಸಿದರು.
ಪರಿಸರದ ಬಗ್ಗೆ ಕಂಡಿರುವ ಕನಸುಗಳಿಗೆ ಬಣ್ಣ ಬಳಿಯುವ ಮೂಲಕ ವ್ಯಕ್ತಪಡಿಸಿದರು. ಮಕ್ಕಳು ಬಿಡಿಸಿದ ಬಹುತೇಕ ಚಿತ್ರಗಳು ಅತ್ಯುತ್ತಮವಾಗಿದ್ದವು.
ಕೆಲ ಮಕ್ಕಳಂತೂ ಹಿರಿಯ ಕಲಾವಿದರ ಚಿತ್ರಗಳಂತೆ ಎದ್ದು ಬರುತ್ತವೆಯೇನೋ ಎಂಬಂತೆ ಪರಿಸರದ ಕಾಳಜಿಯನ್ನು ಚಿತ್ರದ ಮೂಲಕ ಪ್ರಕಟಿಸಿದ್ದರು.
ಅವುಗಳಲ್ಲಿ ಅತ್ಯುತ್ತಮ ಮೊದಲ ಮೂರು ಬಹುಮಾನಗಳಿಗೆ ಪ್ರತಿ ವಿಭಾಗದಲ್ಲಿ ಆಯ್ಕೆ ಮಾಡುವ ಜತೆಗೆ ಸಮಾಧಾನಕರ ಬಹುಮಾನಕ್ಕಾಗಿ ಹಾಗೂ ಗಮನ ಸೆಳೆದ ಚಿತ್ರಗಳನ್ನು ಸಹ ನಿರ್ಣಾಯಕರು ಆಯ್ಕೆ ಮಾಡಿದರು.
ಶ್ಲಾಘನೀಯ ಕಾರ್ಯ: ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಹಸಿರೇ ಉಸಿರು ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
‘ವಿಜಯವಾಣಿ’ ದಿನಪತ್ರಿಕೆ ನಿತ್ಯದ ಆಗುಹೋಗುಗಳನ್ನು ಓದುಗರಿಗೆ ತಲುಪಿಸುವ ಜತೆಗೆ ಸಾಮಾಜಿಕ ಕಳಕಳಿಯನ್ನೂ ತೋರುತ್ತ ಬಂದಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ರೀತಿಯ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಲಹೆ ನೀಡಿದ ಅವರು, ಪ್ಲಾಸ್ಟಿಕ್ ಚೀಲಗಳನ್ನು ಕೆರೆಯಲ್ಲಿ ಎಸೆಯಲಾಗುತ್ತಿದೆ. ರಸ್ತೆ ಮೇಲೆ ತಿಂಡಿಯೊಂದಿಗೆ ಬಿದ್ದಿರುವ ಪ್ಲಾಸ್ಟಿಕ್ ಚೀಲಗಳನ್ನು ಜಾನುವಾರುಗಳು ತಿನ್ನುತ್ತಿವೆ. ಪ್ಲಾಸ್ಟಿಕ್​ನಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಬ್ಬ ಅತಿಥಿ ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೆಕರ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಉತ್ಸಾಹ ತುಂಬುತ್ತವೆ. ಪರಿಸರದ ಬಗ್ಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಗೋಕುಲ ರಸ್ತೆಯ ನಮ್ಮ ಕಿಚನ್ ಮಾಲೀಕ ಆಲಫಿನ್ ಅತಿಥಿಯಾಗಿ ಪಾಲ್ಗೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ವಿಜಯವಾಣಿ ದಿನಪತ್ರಿಕೆ ವಿದ್ಯಾರ್ಥಿಗಳಿಗಾಗಿ ಪ್ರಕಟಿಸುತ್ತಿರುವ ವಿದ್ಯಾರ್ಥಿಮಿತ್ರವನ್ನು ಓದುವ ಮೂಲಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಾಲಕರ ಪರವಾಗಿ ರುಸ್ತುಂ ಮಾತನಾಡಿ, ಮಕ್ಕಳಿಗೆ ಈ ರೀತಿಯ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ವಿಜಯವಾಣಿ ದಿನಪತ್ರಿಕೆ ಮಾಡಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net