environment day ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ

environment day ಹುಬ್ಬಳ್ಳಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು. ಭವರಲಾಲ್​ ಸಿ. ಜೈನ್​, ಭರತ ಭಂಡಾರಿ, ಸೋಹನ್​ ತಾಟೇದ್​, ಅಭಿಷೇಕ ಮೆಹತಾ, ಎಂ. ವಿಜಯಲಕ್ಷ್ಮಿ ಇತರರು ಇದ್ದರು.
environment day ಹುಬ್ಬಳ್ಳಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು. ಭವರಲಾಲ್​ ಸಿ. ಜೈನ್​, ಭರತ ಭಂಡಾರಿ, ಸೋಹನ್​ ತಾಟೇದ್​, ಅಭಿಷೇಕ ಮೆಹತಾ, ಎಂ. ವಿಜಯಲಕ್ಷ್ಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಲೆಯ ಪರಿಸರ ಜಾಗೃತಿ ಕಾರ್ಯಗಳಿಗೆ ಶ್ಲಾಘನೆ
  • ಶಾಂತಿನಿಕೇತನ ಸ್ಕೂಲ್​ನಲ್ಲಿ ಪರಿಸರ ದಿನಾಚರಣೆ
ಹುಬ್ಬಳ್ಳಿ: environment day ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಇಲ್ಲಿಯ ಘಂಟಿಕೇರಿಯ ಎಸ್​ಜೆಆರ್​ವಿಪಿ ಮಂಡಳಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ (ಸಿಬಿಎಸ್​ಇ) ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಸಿಬ್ಬಂದಿ ಉತ್ಸಾಹದಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆ ಆವರಣದಲ್ಲಿ ಹಲವು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿ ನಿರ್ದೇಶಕ ಸೋಹನ್​ ತಾಟೇದ್​ ಅವರು, ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಮರಗಳನ್ನು ನೆಡುವುದು, ನೀರನ್ನು ಮಿತವಾಗಿ ಬಳಸುವುದು ಹಾಗೂ ಪ್ಲಾಸ್ಟಿಕ್​ ಬಳಕೆಯನ್ನು ಕಡಿಮೆ ಮಾಡಬೇಕು. ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ತಿಳಿಸಿದರು.
ಮಂಡಳಿಯ ಅಧ್ಯಕ್ಷ ಭವರಲಾಲ್​ ಸಿ. ಜೈನ್​ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಪರಿಸರ ಜಾಗೃತಿ ಕಾರ್ಯಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net