ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಮದೃಷ್ಟಿ ಕ್ಷಮತಾ ವಿಕಾಸ ಅನುಸಂಧಾನ ಮಂಡಳಿ (ಸಕ್ಷಮ್) ಜಿಲ್ಲಾ ಟಕದಿಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Published on:
Copied
Follow Us
ಧಾರವಾಡ: ಅಂಗವಿಕಲರ ಆಥಿರ್ಕ ಮತ್ತು ಸಾಮಾಜಿಕ ಭದ್ರತೆ ಉನ್ನತಿಕರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಮದೃಷ್ಟಿ ಕ್ಷಮತಾ ವಿಕಾಸ ಅನುಸಂಧಾನ ಮಂಡಳಿ (ಸಕ್ಷಮ್) ಜಿಲ್ಲಾ ಟಕದಿಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಅಂಗವಿಕಲರಿಗೆ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಅದ್ಯಾವುದು ಸರಿಯಾಗಿ ತಲುಪುತ್ತಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವದ ಆಧಾರದ ಮೇಲೆ ಮೂಲ ಸೌಕರ್ಯ ಒದಗಿಸಬೇಕು. ಆಸ್ತಿ ತೆರಿಗೆಯಿಂದ ಸಂರ್ಪೂಣ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆಯು ಪ್ರತಿವರ್ಷ 'ಆನ್ಯುವಲ್ ಡಿಸೆಬಿಲಿಟಿ ವೆಲ್ಫೇರ್ ಆಕ್ಷನ್ ಪ್ಲಾನ್ ಸಿದ್ಧಪಡಿಸಿ, ಶೇ.5ರಷ್ಟು ಕಾಯ್ದಿರಿಸಿದ ನಿಧಿಯ ಬಳಕೆ ಹಾಗೂ ಫಲಾನುಭವಿಗಳ ವಿವರ ಪಾರದರ್ಶಕವಾಗಿ ಪ್ರಕಟಿಸಬೇಕು. ಅಳಿದುಳಿದ ನಿಧಿಯನ್ನು ಮುಂದಿನ ವರ್ಷದ ಅಂಗವಿಕಲರ ಕಲ್ಯಾಣ ಯೋಜನೆಗಳಿಗೆ ಮಾತ್ರ ಬಳಸಬೇಕು. ದಿವ್ಯಾಂಗರಿಗೆ ಮೀಸಲಿಟ್ಟ ಶೇ.5ರ ಅನುದಾನದಲ್ಲೇ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕವನ್ನೂ ಭರಣ ಮಾಡಬೇಕು ಎಂದು ಮನವಿ ಮಾಡಿದರು.
ಕೇಶವ ತೆಲಗು, ಡಾ. ವಿಠ್ಠಲ ಮನಗೂಳಿ, ಬಸವರಾಜ ಮಠಪತಿ, ಡಾ. ಕೆ.ವಿ.ಅಚ್ಯುತ್, ಮಂಜುನಾಥ ಎಚ್.ಕೆ., ಸುಕನ್ಯಾ, ಮಹೇಶ ಗೂಳಪ್ಪನವರ, ವಿಠ್ಠಲ ಲಾಡರ್, ಸತೀಶ ಹೆಗ್ಗಣ್ಣವರ, ಕಾಂತರಾಜು ಇತರರಿದ್ದರು.