ಧಾರವಾಡ: ಪರಿಸರ ನಾಶವಾದರೆ ಜಗತ್ತಿಗೆ ವಿನಾಶ ಕಟ್ಟಿಟ್ಟ ಬುತ್ತಿ. ಎಲ್ಲರೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಪರಿಸರವಾದಿ ಎಸ್. ಮುಂಜಿ ಹೇಳಿದರು.
ಧಾರವಾಡದ ವೀರಶೈವ ಲಿಂಗಾಯತ ಜಾಗೃತ ಮಹಿಳಾ ಸಮಿತಿ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರ ಉಳಿದರೆ ಮಾನವ ಸಂಕುಲ ಉಳಿಯುತ್ತದೆ. ಪರಿಸರ ಉಳಿವು ಅಳಿವು ಜನರ ಕೈಯಲ್ಲಿದೆ. ಪರಿಸರ ಕಾಪಾಡದಿದ್ದರೆ ದೊಡ್ಡ ನಷ್ಟವಾಗುತ್ತದೆ ಎಂದರು.
ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಶಿವಲಿಂಗ ನೀಲಗುಂದ ಮಾತನಾಡಿ, ಮರಗಳನ್ನು ಕಡಿಯುವುದರಿಂದ ಪರಿಸರದಲ್ಲಿ ಅಸಮತೋಲನವಾಗುತ್ತದೆ. ಭಯಾನಕ ರೋಗಗಳು ಉಲ್ಬಣವಾಗುತ್ತವೆ. ಸಸಿಗಳನ್ನು ನೆಟ್ಟು ಪರಿಸರ ಕಾಪಾಡಬೇಕು ಎಂದರು.
ಪತ್ರಕರ್ತ ಪ್ರಸನ್ನಕುಮಾರ ಹಿರೇಮಠ, ವೀರಶೈವ ಲಿಂಗಾಯತ ಜಾಗೃತ ಮಹಿಳಾ ಸಮಿತಿ ಧಾರವಾಡ ಘಟಕದ ಅಧ್ಯಕ್ಷೆ ಭಾಗ್ಯವತಿ ನಡಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಹಾದೇವಿ ಕೆಲಗೇರಿ, ಅನಸೂಯಾ ಜವಳಿ, ಕಲ್ಪನಾ ಕಟಗಿ, ಸುನಂದಾ ಗುಡ್ಡದ, ವಜಜಾಕ್ಷಿ ಆಲದಕಟ್ಟಿ, ಪುಷ್ಪಾ ಪಾಟೀಲ, ಪ್ರೇಮಾ ಹಲಕಿ ಇತರರಿದ್ದರು. ಪ್ರಜ್ಞಾ ನಡಕಟ್ಟಿ ಪರಸರ ಗೀತೆ ಹಾಡಿದರು. ನಳಿನಾಕ್ಷಿ ಅರಳಗುಪ್ಪಿ ಮತ್ತು ಓತಗೇರಿ ನಿರೂಪಿಸಿದರು. ಭಾರತಿದೇವಿ ರಾಜಗುರು ಪರಿಚಯಿಸಿದರು.