ಶಾಲೆಯಲ್ಲಿ 1 ರಿಂದ 8 ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಓದಲು ಕಡ್ಡಾಯವಾಗಿ ಬರಲೇಬೇಕು. ಪ್ರತಿಯೊಂದು ಮಗುವಿಗೂ ವಿಧ್ಯಾಭ್ಯಾಸದ ಜೊತೆಗೆ ಕ್ರೀಡೆಗೆ ಉತ್ತೇಜಿಸಬೇಕು. ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಒಂದು ಶಾಲೆ ಅಥವಾ ಒಂದು ವಸತಿ ನಿಲಯವನ್ನು ದತ್ತು ತೆಗೆದುಕೊಂಡು, ತಿಂಗಳಲ್ಲಿ ಒಂದು ದಿನ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ತಿಳಿದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಬೇರೆ ಬೇರೆ ಉದ್ಯೋಗ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಒಂದು ಶಾಲೆ, ಒಂದು ಕಲೆ, ಒಂದು ಕ್ರೀಡೆ ಎಂಬಂತೆ ಒಳ್ಳೆಯ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸಬೇಕು ಎಂದು ಅವರು ಹೇಳಿದರು.