electrical accident ವಿದ್ಯುತ್ ಅವಘಡದಿಂದ ಯುವಕ ಸಾವು

electrical accident ಕೇಶ್ವಾಪುರ ಪೊಲೀಸ್ ಠಾಣೆ
electrical accident ಕೇಶ್ವಾಪುರ ಪೊಲೀಸ್ ಠಾಣೆ
Published on
ಹುಬ್ಬಳ್ಳಿ: ವಿದ್ಯುತ್ ಅವಘಡದಿಂದ electrical accident ಯುವಕನೊಬ್ಬ ಮೃತಪಟ್ಟ ಘಟನೆ ಕೇಶ್ವಾಪುರದ ಮನೆಯೊಂದರಲ್ಲಿ ಸಂಭವಿಸಿದೆ.
ಕಿರಣ ಪಾವಿ(21) ಮೃತ ಯುವಕ. ರಮೇಶ ಶೆಟ್ಟಿ ಅವರ ಮನೆಗೆ ಎಲೆಕ್ಟ್ರಿಕ್‌ಗೆ ಸಂಬಂಧಿಸಿದಂತೆ ಕೆಲಸ ಮಾಡಲು ಕಿರಣ ಹೋಗಿದ್ದರು. ಆಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಯಾವುದೇ ಸುರಕ್ಷತಾ ವಸ್ತುಗಳ ನೀಡದ ಕಾರಣ ವಿದ್ಯುತ್ ಗುತ್ತಿಗೆದಾರ ರಾಘವೇಂದ್ರ ಗರುಡ ಹಾಗೂ ಮನೆ ಮಾಲೀಕ ರಮೇಶ ಶೆಟ್ಟಿ ವಿರುದ್ಧ ಮೃತನ ತಾಯಿ ನೀಲಮ್ಮ ದೂರು ನೀಡಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net