ಹುಬ್ಬಳ್ಳಿ: ಹಳ್ಳದಲ್ಲಿ ನೀರು ಕುಡಿಯಲು ಧಾವಿಸಿದ್ದ ಮೂರು ಎಮ್ಮೆಗಳಿಗೆ ವಿದ್ಯುತ್ ಸ್ಪರ್ಶ
electric shock
ಆಗಿರುವುದನ್ನು ಗಮನಿಸಿ, ಅವುಗಳ ರಕ್ಷಣೆಗೆ ಮುಂದಾದ ಯುವಕನಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಘಟನೆಯಲ್ಲಿ ಎರಡು ಎಮ್ಮೆಗಳು ಮೃತಪಟ್ಟ ಘಟನೆ ಇಲ್ಲಿಯ ಗೋಕುಲ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಮಂಜುನಾಥ ಹುಲಿಮನಿ ಹಾಗೂ ಸಹೋದರ ಕಾರ್ತಿಕ ಸೇರಿ ಎಮ್ಮೆ ತೆಗೆದುಕೊಂಡು ಹೋಗಿದ್ದರು. ಮುಂಭಾಗದಲ್ಲಿ ಧಾವಿಸಿದ ಎರಡು ಎಮ್ಮೆಗಳಿಗೆ ವಿದ್ಯುತ್ ಸ್ಪರ್ಶ ಆಗಿರುವುದನ್ನು ನೋಡಿದ ಕಾರ್ತಿಕ ಇನ್ನೊಂದು ಎಮ್ಮೆಯನ್ನು ಬೇರೆಡೆಗೆ ತಿರುಗಿಸಲು ಓಡಿಹೋದಾಗ ಆತನಿಗೂ ವಿದ್ಯುತ್ ಸ್ಪರ್ಶವಾಗಿದೆ.
ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ದೇವಪ್ಪ ಮಂಡೇಕರ ಎನ್ನುವವರು ಟವಲ್ ಸಹಾಯದಿಂದ ಕಾರ್ತಿಕ್ ಮತ್ತು ಒಂದು ಎಮ್ಮೆಯನ್ನು ರಕ್ಷಿಸಿದ್ದಾರೆ. ವಿದ್ಯುತ್ ತಂತಿ ಹರಿದು ಹಳ್ಳದಲ್ಲಿ ಬಿದ್ದಿರುವುದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪಶುವೈದ್ಯ ಎಂ.ವೈ . ಮಡಿವಾಳರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಸ್ಕಾಂ ಲೈನ್‌ಮನ್ ಬೀರಪ್ಪ ಮತ್ತು ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ವಾಲೀಕಾರ, ಪೋಲಿಸರು ಭೇಟಿ ನೀಡಿ ವರದಿ ಪಡೆದಿದ್ದಾರೆ.