ಧಾರವಾಡ: ಮನೆಯಲ್ಲಿ ಅಜ್ಜ&ಅಜ್ಜಿಯಂದಿರು ಕುಟುಂಬದ ಅಮೂಲ್ಯ ಆಸ್ತಿ ಇದ್ದಂತೆ. ಅವರು ತಮ್ಮ ಜೀವನದ ಅನುಭವಗಳನ್ನು ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಹಂಚಿಕೊಳ್ಳುತ್ತಾರೆ. ಪ್ರೀತಿ, ಮಮತೆ, ಸಂಸ್ಕಾರ ಹಾಗೂ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತಾರೆ ಎಂದು ಹುಬ್ಬಳ್ಳಿಯ ಕೆಎಂಸಿಐಆರ್ನ ಡಾ. ಶಿವಾನಂದ ಹಿರೇಮಠ ಹೇಳಿದರು.