ಧಾರವಾಡ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಮುಸ್ಲಿಂರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು ಅಂಜುಮನ್ ಕಾಲೇಜಿನಿಂದ ಸುಭಾಸ್ ರಸ್ತೆ, ಗಾಂಧಿ ಚೌಕ್, ವಿವೇಕಾನಂದ ವೃತ್ತ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಬಾರಿ ಡಿಜೆ ಹಚ್ಚದಿರಲು ಅಂಜುಮನ್ ಸಂಸ್ಥೆಯೇ ನಿರ್ಧಾರ ಕೈಗೊಂಡಿದ್ದರಿಂದ ಈದ್ ಮಿಲಾದ್ ಧಾಮಿರ್ಕವಾಗಿ ಶ್ರದ್ಧಾಭಕ್ತಿಯಿಂದ ಮೆರವಣಿಗೆ ನಡೆಸಲಾಯಿತು.
* ಶರಬತ್ ಹಂಚಿಕೆ- ಅನ್ನ ಸಂತರ್ಪಣೆ:
ಈದ್ ಮಿಲಾದ್ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾರ್ವಜನಿಕರಿಗೆ ಶರಬತ್ ಹಂಚಿದರು. ಕೆಲವೆಡೆ ಅನ್ನಸಂತರ್ಪಣೆ ಕೂಡ ನಡೆಯಿತು.