egg rate hike ಮೊಟ್ಟೆ ದರ ಏರುಮುಖ

egg rate hike ಕೋಳಿ ಮೊಟ್ಟೆ.
egg rate hike ಕೋಳಿ ಮೊಟ್ಟೆ.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರ ಜೇಬಿಗೆ ಭಾರ
  • ದುಬಾರಿ ದುನಿಯಾದಲ್ಲಿ ಮತ್ತೊಂದು ಬರೆ
ಹುಬ್ಬಳ್ಳಿ: egg rate hike ಕಳೆದೊಂದು ತಿಂಗಳಿಂದ ಮೊಟ್ಟೆ ದರ ಏರುಮುಖವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೋಳಿ ಆಹಾರದ ಬೆಲೆ ಹೆಚ್ಚಳ, ಬೇಡಿಕೆ ಅಧಿಕಗೊಂಡಿರುವುದು ಸೇರಿ ನಾನಾ ಕಾರಣಗಳಿಗೆ ಮೊಟ್ಟೆ ಬೆಲೆ ಗಗನಮುಖಿಯಾಗಿದೆ.
ಕಳೆದ ಮೇ 18ರಂದು 100 ಮೊಟ್ಟೆಗೆ 600 ರೂಪಾಯಿ ಇದ್ದ ದರ ಜೂನ್​ 18ಕ್ಕೆ 705ರೂ. ಆಗಿದೆ. ಒಂದೇ ತಿಂಗಳಲ್ಲಿ 105 ರೂ. ಹೆಚ್ಚಳವಾಗಿದೆ. ಇದು ಸಗಟು ಮಾರುಕಟ್ಟೆ ದರವಾದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒಂದು ಮೊಟ್ಟೆಗೆ ಎಂಟು ರೂಪಾಯಿ ಮಾರಾಟವಾಗುತ್ತಿದೆ.
ಏಪ್ರಿಲ್​ನಲ್ಲಿ ಇನ್ನೂ ಕಡಿಮೆ ಇತ್ತು. 100 ಮೊಟ್ಟೆಗೆ 500ರೂ. ಆಸುಪಾಸಿನಲ್ಲಿತ್ತು. ಶಾಲೆಗಳ ಪುನರಾರಂಭವಾದ ನಂತರ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಕೊಡಲಾಗುತ್ತದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ. ದುಬಾರಿ ದುನಿಯಾದಲ್ಲಿ ದರ ಹೆಚ್ಚಳ ಗ್ರಾಹಕರ ಜೇಬಿಗೆ ಭಾರವಾಗಿದೆ.
ಇದಲ್ಲದೇ ಕೋಳಿ ಆಹಾರವಾದ ಸೋಯಾಬೀನ್​, ಗೋವಿನ ಜೋಳದ ದರ ಹೆಚ್ಚಾಗಿದೆ. ಸೋಯಾಬೀನ್​ ಕ್ವಿಂಟಾಲ್​ಗೆ 5 ಸಾವಿರ ರೂ. ಇದ್ದದ್ದು ಇದೀಗ 7 ಸಾವಿರ ರೂ. ವರೆಗೆ ಹೋಗಿದೆ. ಗೋವಿನ ಜೋಳ ಕ್ವಿಂಟಾಲ್​ಗೆ 2200ರೂ. ಆಗಿದೆ. ಇದರಿಂದ ಫೀಡ್ಸ್​ ಉತ್ಪಾದನಾ ವೆಚ್ಚದಲ್ಲಿ ವ್ಯತ್ಯಾಸವಾಗಿದ್ದು, ದರವೂ ಹೆಚ್ಚಳವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net