ವಿಜ್ಞಾನ ಗ್ಯಾಲರಿ, ವಿವಿಧ ಆವಿಷ್ಕಾರಗಳ ನೈಜ ಕಾರ್ಯವಿಧಾನದ ಪರಿಚಯ
ನವೀನ ಕಲ್ಪನೆಗಳತ್ತ ಮನಸ್ಸನ್ನು ಕೊಂಡೊಯ್ಯಲು ಸಹಕಾರಿ
ಹುಬ್ಬಳ್ಳಿ: ಇಲ್ಲಿಯ ಮಂಜುನಾಥನಗರ ಕೆಎಲ್ಇ ಸಂಸ್ಥೆಯ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಸಮೀಪದ ತಿಮ್ಮಾಪುರದಲ್ಲಿರುವ (tech park) ಎಂಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ಪಾರ್ಕ್ಗೆ ಭೇಟಿ ನೀಡಿದರು. ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದ ನೇರ ಅನುಭವ ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ನವೀನ ಶಕ್ತಿ, ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ವಿಜ್ಞಾನ ಗ್ಯಾಲರಿ ಮತ್ತು ವಿವಿಧ ಆವಿಷ್ಕಾರಗಳ ನೈಜ ಕಾರ್ಯವಿಧಾನದ ಪರಿಚಯವನ್ನು ಈ ಭೇಟಿ ಮಾಡಿಸಿತು.
ವಿಜ್ಞಾನ ಶಿಕ್ಷಕಿ ನಿವೇದಿತಾ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್ನಲ್ಲಿ ಅನೇಕ ವಿಷಯಗಳನ್ನು ಕಲಿಯಲು ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು ಉತ್ತಮ ಅವಕಾಶಗಳಿವೆ ಎಂದರು.