ಸೃಜನಶೀಲತೆ ಬೆಳೆಸಲು ಶೈಕ್ಷಣಿಕ ಕಾರ್ಯಕ್ರಮಗಳು ಅಗತ್ಯ

ಜೆಎಸ್ ಎಸ್ ನಲ್ಲಿ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಡಾ. ಅಜಿತ್ ಪ್ರಸಾದ ಮಾತನಾಡಿದರು.
ಜೆಎಸ್ ಎಸ್ ನಲ್ಲಿ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಡಾ. ಅಜಿತ್ ಪ್ರಸಾದ ಮಾತನಾಡಿದರು.
Published on
ಧಾರವಾಡ: ವಿದ್ಯಾಥಿರ್ಗಳಲ್ಲಿ ಸಂಶೋಧನಾ ಮನೋಭಾವ, ಉದ್ಯೋಗ ಕೌಶಲ ಮತ್ತು ಸೃಜನಶೀಲತೆ ಬೆಳೆಸಲು ವಿವಿಧ ಶೈಣಿಕ ಕಾರ್ಯಕ್ರಮಗಳು, ಕಾರ್ಯಾಗಾರ, ಸೆಮಿನಾರ್​, ಉಪನ್ಯಾಸಗಳು, ಕೈಗಾರಿಕಾ ಭೇಟಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳು ಅಗತ್ಯ. ನಮ್ಮ ಸಂಸ್ಥೆಯಲ್ಲಿ ಇವುಗಳನ್ನು ಕಲಿಸಲಾಗುತ್ತಿದೆ ಎಂದು ಜೆಎಸ್​ಎಸ್​ ಪ್ರ.ಕಾರ್ಯದಶಿರ್ ಡಾ. ಅಜಿತ ಪ್ರಸಾದ ಹೇಳಿದರು.
ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2026&27ನೇ ಸಾಲಿಗೆ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾಥಿರ್ಗಳಿಗೆ ಶುಕ್ರವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಎಸ್​ಸಿ, ಎಂ.ಕಾಂ., ಹಾಗೂ ಎಂ.ಎ. ಸ್ನಾತಕೋತ್ತರ ಕೋರ್ಸ್​ಗಳಿಗೆ ಪ್ರವೇಶ ಪಡೆದ ವಿದ್ಯಾಥಿರ್ಗಳಿಗೆ ಸಂಸ್ಥೆಯ ಶೈಣಿಕ ಚಟುವಟಿಕೆಗಳು, ನಿಯಮಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಸಂಸ್ಥೆಯು ಗುಣಮಟ್ಟದ ಉನ್ನತ ಶಿಣಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಸ್ನಾತಕೋತ್ತರ ವಿಭಾಗಗಳ ವಿದ್ಯಾಥಿರ್ಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಶೈಣಿಕ ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೈಣಿಕ ಸಾಧನೆ ಮಾಡಿದ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಕವಿವಿ ಆಂಗ್ಲ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಶಾಲ್ಮಲಾ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಜ್ಯೋತಿ ಅಕ್ಕಿ, ಡಾ. ಶಶಿಕಾಂತ, ರಜನಿ ತಾಳಿಕೋಟಿ, ಮುರಳೀಧರ ಹೆಗಡೆ ಇದ್ದರು. ಡಾ. ಸೂರಜ್​ ಜೈನ್​ ಸ್ವಾಗತಿಸಿದರು. ಚೈತ್ರಾ ಕೊಕಾಟಿ ನಿರೂಪಿಸಿದರು. ಡಾ. ಶಿಲ್ಪಾ ನಾಯಕ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net