ಶಿಕ್ಷಣ ಸಮಾಜ ಬದಲಿಸುವ ಸಾಧನ society

society ಹುಬ್ಬಳ್ಳಿ ಚನ್ನಪೇಟೆಯ ಸರ್ಕಾರಿ ಹೆಣ್ಣು ಮಕ್ಕಳ ಕೇಂದ್ರ ಶಾಲೆಯ ವಿದ್ಯಾರ್ಥಿಗಳಿಗೆ ವಿಎಕೆ ಫೌಂಡೇಶನ್ ವತಿಯಿಂದ ಶಾಲಾ ಬ್ಯಾಗ್, ಪುಸ್ತಕ, ಪರೀಕ್ಷಾ ಕಿಟ್ ವಿತರಿಸಲಾಯಿತು.
society ಹುಬ್ಬಳ್ಳಿ ಚನ್ನಪೇಟೆಯ ಸರ್ಕಾರಿ ಹೆಣ್ಣು ಮಕ್ಕಳ ಕೇಂದ್ರ ಶಾಲೆಯ ವಿದ್ಯಾರ್ಥಿಗಳಿಗೆ ವಿಎಕೆ ಫೌಂಡೇಶನ್ ವತಿಯಿಂದ ಶಾಲಾ ಬ್ಯಾಗ್, ಪುಸ್ತಕ, ಪರೀಕ್ಷಾ ಕಿಟ್ ವಿತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಒಬ್ಬ ವಿದ್ಯಾರ್ಥಿ ವಿದ್ಯಾವಂತರಾದರೆ ಒಂದು ಕುಟುಂಬವೇ ವಿದ್ಯಾವಂತವಾಗುತ್ತದೆ.
  • ಶಿಕ್ಷಣವೇ ಅತ್ಯಂತ ದೊಡ್ಡ ಹೂಡಿಕೆ.
  • ಪ್ರತಿಯೊಬ್ಬ ಮಗುವಿನ ಕೈಯಲ್ಲಿ ಪುಸ್ತಕ ಇರಬೇಕು,
ಹುಬ್ಬಳ್ಳಿ :
ಚನ್ನಪೇಟೆಯಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಕೇಂದ್ರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 250ಕ್ಕಿಂತ ಹೆಚ್ಚು ಶಾಲಾ ಬ್ಯಾಗ್, ಪುಸ್ತಕಗಳು ಹಾಗೂ ಪರೀಕ್ಷಾ ಕಿಟ್​ಗಳನ್ನು ವಿತರಿಸಿ, ಅವರು ಮಾತನಾಡಿದರು.
ಪ್ರತಿಯೊಬ್ಬ ಮಗುವಿನ ಕೈಯಲ್ಲಿ ಪುಸ್ತಕ ಇರಬೇಕು, ಕನಸುಗಳಿಗೆ ರೆಕ್ಕೆಗಳಿರಬೇಕು. ಆರ್ಥಿಕ ಪರಿಸ್ಥಿತಿ ಯಾವುದೇ ಮಗುವಿನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬುದು ನಮ್ಮ ಫೌಂಡೇಶನ್​ನ ಸಂಕಲ್ಪ ಎಂದರು.
ಒಬ್ಬ ವಿದ್ಯಾರ್ಥಿ ವಿದ್ಯಾವಂತರಾದರೆ ಒಂದು ಕುಟುಂಬವೇ ವಿದ್ಯಾವಂತವಾಗುತ್ತದೆ. ಇದರೊಂದಿಗೆ ಸಮಾಜ ಸುಭದ್ರವಾಗುತ್ತದೆ ಹಾಗೂ ದೇಶದ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ ಎಂದು ಹೇಳಿದರು.
ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ನನಸಾಗಲಿ ಎಂಬ ಆಶಯದೊಂದಿ ವಿಎಕೆ ಫೌಂಡೇಶನ್ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಿದೆ. ಸಮಾಜದ ಅಭಿವೃದ್ಧಿಗೆ ಸೇವೆಯೇ ನಮ್ಮ ಧ್ಯೇಯ, ಶಿಕ್ಷಣವೇ ಅತ್ಯಂತ ದೊಡ್ಡ ಹೂಡಿಕೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ ಹಳ್ಳಿಕೇರಿ, ಸಂಘ ಪರಿವಾರದ ಹಿರಿಯರಾದ ವಿನಾಯಕ ತಾಂಬೆ, ಮಹಾನಗರ ಪಾಲಿಕೆ ಸದಸ್ಯೆ ರಾಧಾಬಾಯಿ ಸಫಾರೆ, ಬಿಜೆಪಿ ಪ್ರಮುಖರಾದ ಗೋಪಾಲ ಬದ್ದಿ, ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net