15 ದಿನದಿಂದ ಕುಡಿಯುವ ನೀರು Drinking water supply ಪೂರೈಕೆ ಸ್ಥಗಿತ
ಕುಂದಗೋಳ ತಾಲೂಕಿನ ಹಿರೇನರ್ತಿ, ಬೆನಕನಹಳ್ಳಿ ಹಾಗೂ ಬಸಾಪೂರ ಗ್ರಾಮಗಳಿಗೆ ಕುಡಿಯುವ ನೀರು Drinking water supply ಪೂರೈಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಶಿರಸ್ತೇದಾರ್ ಮಹೇಶ ಶ್ಯಾಮನಾಳ ಅವರಿಗೆ ಮನವಿ ಸಲ್ಲಿಸಿದರು. ಗುರುಸಿದ್ದಗೌಡ ಮೇಳಮಾಲಾಗಿ, ಕಲ್ಲಪ್ಪ ಹರಕುಣಿ, ಮಂಜುನಾಥ ಕುಂಬರ, ಶಿವು ಮೇಳಮಾಳಗಿ ಇತರರಿದ್ದರು.
ಕುಂದಗೋಳ: ತಾಲೂಕಿನ ಹಿರೇನರ್ತಿ, ಬೆನಕನಹಳ್ಳಿ ಹಾಗೂ ಬಸಾಪೂರ ಗ್ರಾಮಗಳಲ್ಲಿ 15 ದಿನಗಳಿಂದ ಕುಡಿಯುವ ನೀರು ಪೂರೈಕೆ Drinking water supply ಸ್ಥಗಿತಗೊಂಡಿದ್ದು, ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಕೂಡಲೇ ನೀರಿನ ಹಾಹಾಕಾರ ಬಗೆಹರಿಸಬೇಕು ಎಂದು ಒತ್ತಾಯಿಸಿ ಹಿರೇನರ್ತಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಸೋಮವಾರ ಶಿರಸ್ತೇದಾರ್ ಮಹೇಶ ಶ್ಯಾಮನಾಳ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಗಳಲ್ಲಿನ ಶುದ್ಧೀಕರಣ ಘಟಕಗಳು ಕೆಟ್ಟಿವೆ. ಮೋಟಾರ್ ದುರಸ್ತಿಯ ನೆಪ ಹೇಳಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರು ನೀರಿಗಾಗಿ ಪಕ್ಕದ ಊರುಗಳನ್ನು ಅವಲಂಬಿಸುವಂತಾಗಿದೆ. ಕೂಡಲೇ ನೀರು ಪೂರೈಕೆ ಸರಿಪಡಿಸದಿದ್ದರೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.