drama play "ಆಶಾಕಿರಣ' ಸಾಮಾಜಿಕ ಕಳಕಳಿಯ ನಾಟಕ

drama play ಹುಬ್ಬಳ್ಳಿಯ ಫರ್ಟಿಲಿಟಿ ಸೆಂಟರ್​ನಲ್ಲಿ ಲೇಖಕ ಸೋಮು ರೆಡ್ಡಿ ಅವರ ರಚನೆಯ ಆಶಾಕಿರಣ ನಾಟಕ ಪ್ರದರ್ಶನ ನೀಡಿದ ಕಲಾವಿದರನ್ನು ಅಭಿನಂದಿಸಲಾಯಿತು.
drama play ಹುಬ್ಬಳ್ಳಿಯ ಫರ್ಟಿಲಿಟಿ ಸೆಂಟರ್​ನಲ್ಲಿ ಲೇಖಕ ಸೋಮು ರೆಡ್ಡಿ ಅವರ ರಚನೆಯ ಆಶಾಕಿರಣ ನಾಟಕ ಪ್ರದರ್ಶನ ನೀಡಿದ ಕಲಾವಿದರನ್ನು ಅಭಿನಂದಿಸಲಾಯಿತು.
Published on
ಹುಬ್ಬಳ್ಳಿ: drama play ನಗರದ ಗೋಕುಲ ರಸ್ತೆಯಲ್ಲಿರುವ ನೋವಾ ಐವಿಎಫ್​ ಫರ್ಟಿಲಿಟಿ ಸೆಂಟರ್​ ಬಯಲು ರಂಗಸಜ್ಜಿಕೆಯಲ್ಲಿ ಲೇಖಕ ಸೋಮು ರೆಡ್ಡಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಸಾಮಾಜಿಕ ತುಡಿತದ "ಆಶಾಕಿರಣ' ನಾಟಕವು ನೋಡುಗರ ಗಮನ ಸೆಳೆಯಿತು.
ಜುಲೈ 25, ವರ್ಲ್ಡ್​ ಐವಿಎಫ್​ ದಿನದ ಪ್ರಯುಕ್ತ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. 25 ನಿಮಿಷದ ಈ ನಾಟಕವು ಸಂಪೂರ್ಣವಾಗಿ ಐವಿಎಫ್​ ಬಗೆಗೆ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವ ಕಥೆ ಹೊಂದಿದೆ. ಬಂಜೆತನವೂ ಸಹ ವೈದ್ಯಕಿಯ ಸ್ಥಿತಿಯೇ ಹೊರತು ಅದು ವ್ಯಕ್ತಿಯ ವೈಯಕ್ತಿಕ ನೂನ್ಯತೆಯಲ್ಲ ಎಂಬುದನ್ನು ನಾಟಕ ತಿಳಿಸಿಕೊಡುತ್ತದೆ.
ನಿರ್ದೇಶಕ ಸೋಮು ರೆಡ್ಡಿ ಅವರ ಕಲ್ಪನಾ ಶಕ್ತಿಯಿಂದ ರಚನೆಯಾದ ಈ ಕಥೆಯು, ಪ್ರೇಕ್ಷಕನನ್ನು ಆಳವಾಗಿ ಆಲೋಚನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಐವಿಎಫ್​ ಫರ್ಟಿಲಿಟಿ ಸೆಂಟರ್​ ಸಹಯೋಗದಲ್ಲಿ ಏರ್ಪಡಿಸಿದ್ದ ನಾಟಕದಲ್ಲಿ ಅಶ್ವಘೋಷ ಎ ಟ್ರಸ್ಟ್​ ಆಫ್​ ಥಿಯೇಟರ್​ ಧಾರವಾಡ ಘಟಕದ ಕಲಾವಿದರಾದ ಜಗದೀಶ ಮೂಕಿ, ಬಸವರಾಜ ದೊಡ್ಡಮನಿ, ರಾಧಿಕಾ ಶಿಗ್ಗಾಂವಿ, ಮಲ್ಲಿಕಾ ಮತ್ತು ವಿನಾಯಕ ಹುಬ್ಬಳ್ಳಿ ಅವರು ಅಭಿನಯಿಸಿದರು.
ಶ್ರೀಕಾಂತ ಕುಲಕರ್ಣಿ ಪ್ರಸಾದನ, ಷಣ್ಮುಖ ಮತ್ತು ರವಿ ಅವರ ಸಂಗೀತ ಅಚ್ಚುಕಟ್ಟಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net