drama play ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಂಡ ಶನಿ ಮಹಾತ್ಮೆ ನಾಟಕದ ದೃಶ್ಯ.
Published on:
Copied
Follow Us
ಹುಬ್ಬಳ್ಳಿ: drama play ಇಲ್ಲಿಯ ಶನಿ ಪೂಜಾ ಸೇವಾ ಸಮಿತಿ ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಸಾಮೂಹಿಕ ಶನಿ ಪೂಜೆ ಹಾಗೂ ಶನಿ ಮಹಾತ್ಮೆ ನಾಟಕ ಏರ್ಡಿಸಲಾಗಿತ್ತು.
ಮಂಗಳೂರಿನ ಶ್ರೀಲಲಿತೆ ಕಲಾವಿದರು ಪ್ರಸ್ತುತಪಡಿಸಿದ ಶನಿ ಮಹಾತ್ಮೆ ನಾಟಕ ಪೌರಾಣಿಕ ಕಥಾವಸ್ತುವುಳ್ಳ ಸಾಂಪ್ರದಾಯಿಕ ರಂಗಕಲೆಯೊಂದು ಪ್ರಸ್ತುತ ಕಾಲ ಘಟ್ಟದಲ್ಲೂ ಸುಮಾರು ಎರಡೂವರೇ ಗಂಟೆ ಪ್ರೇಕ್ಷಕ ಸಮೂಹ ಹಿಡಿದಿಟ್ಟುಕೊಂಡು ಪ್ರಶಂಸೆ ಗಳಿಸಬಲ್ಲದು ಎಂದು ಸಾಬೀತು ಮಾಡಿತು.
ಕಿಶೋರ್ ಡಿ. ಶೆಟ್ಟಿ ನಿರ್ಮಿಸಿದ ಜೀವನ್ ಉಳ್ಳಾಲ್ ನಿರ್ದೇಶಿಸಿದ ನಾಟಕ ಮೋಹನ್ ಕೊಪ್ಪಳ ಕದ್ರಿಯವರ ಸಂಯೋಜನೆ, ಕದ್ರಿ ನವನೀತ್ ಶೆಟ್ಟಿ ಅವರ ರಚನೆ- ಸಾಹಿತ್ಯದಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ದೀಪಕ್ ಮಾಲಾ ಹಾಡು, ಗೋಕುಲ್ ಕದ್ರಿ, ಪ್ರದಿಪ್ ಆಳ್ವ ಕದ್ರಿಯವರ ಸಹಕಾರ ಪ್ರಸರಣದಿಂದಾಗಿ ಅದ್ಭುತವಾಗಿ ಮೂಡಿ ಬಂದಿದೆ.
ಆಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಪೊರ್ಲು ಆರ್ಟ್ಸ್ ಕುಡ್ಲ ಅವರ ರಂಗ ವಿನ್ಯಾಸ ನಾಟಕಕ್ಕೊಂದು ಹೊಸ ಮೆರುಗು ನೀಡಿದೆ. ಚಿತ್ರ ಶಾಲೆಯ ಹಂಸ ಪಕ್ಷಿ ಸಜೀವಗೊಂಡು ಮುತ್ತಿನ ಹಾರವನ್ನು ನುಂಗುವುದು.
ಅಭಿನಯಕ್ಕೂ ಮಾತಿಗೂ ಕಿಂಚಿತ್ತು ವ್ಯತ್ಯಯವಿಲ್ಲದಂತೆ ಹಿನ್ನೆಲೆಯಲ್ಲಿ ಸ್ಪಷ್ಟ ಧ್ವನಿ ಮೂಡಿ ಬಂದಿರುವುದು, ರಂಗ ಬೆಳಕಿನ ಸಮರ್ಪಕ ಬಳಕೆ ನಾಟಕವನ್ನು ಅತ್ಯುತ್ತಮವಾಗಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹರಿಶ್ಚಂದ್ರ ಚಂದ್ರಮತಿಯರ ಪಾತ್ರ ಪ್ರೇಕ್ಷಕ ವರ್ಗದ ಕಣ್ಣಿನಲ್ಲಿ ನೀರು ತರಿಸಿದರೆ, ರಾಜ ವಿಕ್ರಮ, ಆಲೋಲಿಕ, ವರ್ತಕ, ಚಂದ್ರಪ್ರಭ ನಳ, ಋತುಪರ್ಣ ಮುಂತಾದ ಪಾತ್ರಧಾರಿಗಳ ಅಭಿನಯ ನಾಟಕಕ್ಕೊಂದು ವಿಶೇಷ ಕಳೆ ನೀಡಿದೆ.
ನಾಟಕದುದ್ದಕ್ಕೂ ಶನಿ ಪಾತ್ರಧಾರಿಯ ಗಂಭೀರ ಅಭಿನಯ, ಸ್ಪಷ್ಟ ಹಿನ್ನೆಲೆ ಮಾತುಗಾರಿಕೆ ನೋಡುಗರಲ್ಲಿ ವಿಶೇಷ ಭಕ್ತಿ ಭಾವವನ್ನು ಪ್ರೇರೇಪಿಸಿ ಪುನೀತರಾಗುವಂತೆ ಮಾಡಿದೆ.