Drama artist ರಂಗಜೀವಿಗೆ ಅಕಾಡೆಮಿ ಗೌರವ ಪ್ರಶಸ್ತಿ

Drama artist ರಂಗಕಲಾವಿದ ಜಿ.ವಿ. ಹಿರೇಮಠ.
Drama artist ರಂಗಕಲಾವಿದ ಜಿ.ವಿ. ಹಿರೇಮಠ.
Published on

ಪ್ರಮುಖ ಮುಖ್ಯಾಂಶಗಳು

  • ರಂಗ ಕಲಾವಿದನಿಗೆ ಉನ್ನತ ಪುರಸ್ಕಾರ
  • ಬಾಲ್ಯದಿಂದಲೇ ನಾಟಕಗಳ ಅಭಿರುಚಿ
ಹುಬ್ಬಳ್ಳಿ: Drama artist ಖ್ಯಾತ ರಂಗಭೂಮಿ ಕಲಾವಿದ ಗದಿಗೆಯ್ಯಾ ವಿ. ಹಿರೇಮಠ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಲ್ಲಮ್ಮನ ಬೆಳವಡಿಯಲ್ಲಿ ವಿಘ್ನೇಶ್ವರಯ್ಯ ಹಾಗೂ ಶಾರದಾ ಹಿರೇಮಠ ದಂಪತಿಯ ಪುತ್ರನಾದ ಗದಿಗಯ್ಯ ಅವರು ಸದ್ಯ ಹುಬ್ಬಳ್ಳಿಯಲ್ಲಿ ಜೀವಿ ಕಲಾ ಬಳಗದ ಮೂಲಕ ರಂಗ ಚಟುವಟಿಕೆ ನಡೆಸುತ್ತಿದ್ದಾರೆ.
ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಪದವಿ, ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಮಾಡಿದರು.
ಬಾಲ್ಯದಿಂದಲೂ ರಂಗ ಕಲೆ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪರಿಸರದಲ್ಲಿ ನೇತಾಜಿ ತರುಣ ಸಂಘದ ಕಾರ್ಯಗಳಲ್ಲಿ ತೊಡಗಿದ್ದರು. 6ನೇ ವಯಸ್ಸಿನಲ್ಲಿ ತರುಣ ಸಂಘದ ಹಿರಿಯ ಕಲಾವಿದರು ಅಭಿನಯಿಸಿದ ಬದುಕು ಬಂಗಾರವಾಯಿತು ನಾಟಕದಲ್ಲಿ ಬಾಲಕಿಯ ಪಾತ್ರಕ್ಕೆ ಬಣ್ಣ ಹಚ್ಚಿದರು.
ಅಲ್ಲಿಂದ ಆರಂಭವಾದ ಇವರ ರಂಗ ಕಲೆ, ನಾಟಕದ ಗೀಳು ಇವರನ್ನು ಅನೇಕ ನಾಟಕಗಳಲ್ಲಿ ಅಭಿನಯಿಸುವಂತೆ ಮಾಡಿತು.
ಪಾತ್ರಗಳಿಗೆ ಜೀವ ತುಂಬಿದ್ದಷ್ಟೇ ಅಲ್ಲದೇ 16ಕ್ಕೂ ಹೆಚ್ಚು ನಾಟಕ ಬರೆದಿದ್ದಾರೆ. ಇವರು ನಾಟಕ ಕಲಾವಿದರು ಮಾತ್ರವಲ್ಲ, ಬರಹಗಾರರು, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ತಮ್ಮದೇ ಆದ ವೃತ್ತಿ ರಂಗಭೂಮಿ ಹುಟ್ಟು ಹಾಕಿದ್ದಾರೆ. ಜೀವಿ ಕಲಾ ಬಳಗದ ಮೂಲಕ ಅನೇಕ ನಾಟಕಗಳನ್ನು ಪ್ರದರ್ಶನ ನೀಡಿದ್ದಾರೆ.
ಬೆಳಗಾವಿಯಿಂದ ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಬಂದ ನಂತರ ಇವರ ಕಲಾಯಾನ ವಿಸ್ತಾರಗೊಂಡಿತು. ಆಕಾಶವಾಣಿ ಬಿ ಗ್ರೇಡ್​ ಕಲಾವಿದರಾಗಿ 33 ವರ್ಷ ಸೇವೆ ಸಲ್ಲಿಸಿದರು. ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ದಶಕಗಳಿಂದ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಜೀವಿ ಕಲಾ ಬಳಗದ ಹಿರೇಮಠ ಅವರಿಗೆ ಪ್ರಶಸ್ತಿ ಬಂದಿರುವುದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net