ಧಾರವಾಡ: ಬೆಂಗಳೂರಿನ ಡಾ. ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳ ವಿಶಿಷ್ಟ ಸೇವೆ ಗುರುತಿಸಿ ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ `ವಿದ್ಯಾಶಂಕರ' ಪ್ರಶಸ್ತಿಗೆ ನಗರದ ಹಿರಿಯ ಭಾಷಾವಿಜ್ಞಾನಿ, ಸಂಶೋಧಕ, ಡಾ. ಸಂಗಮೇಶ ಸವದತ್ತಿಮಠ ಭಾಜನರಾಗಿದ್ದಾರೆ. ಡಾ. ಸವದತ್ತಿಮಠ ಅವರು 135 ಕೃತಿಗಳನ್ನು ಕನ್ನಡ ವಾಙ್ಮಯ ಲೋಕಕ್ಕೆ ನೀಡಿದ್ದಾರೆ. ಪ್ರಶಸ್ತಿಯು 30 ಸಾವಿರ ರೂಪಾಯಿ ನಗದು ಒಳಗೊಂಡಿದೆ. ನ. 18ರಂದು ಸಂಜೆ 4.30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಹಂಪಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡುವರು.